ರಾಷ್ಟ್ರೀಯ

ಅಮೆರಿಕಾವನ್ನು ಹಿಂದಿಕ್ಕಲಿರುವ 2040ರ ಭಾರತದ ಆರ್ಥಿಕತೆ!

Pinterest LinkedIn Tumblr


ನವದೆಹಲಿ: ಮುಂದಿನ ಕೆಲವು ದಶಕಗಳಲ್ಲಿ ಜಾಗತಿಕ ಆರ್ಥಿಕ ಕ್ರಮ ಸುಧಾರಿತದಿಂದ ಬೆಳೆಯುತ್ತಿರುವ ಆರ್ಥಿಕತೆಗೆ ಬದಲಾಗುವ ಸಾಧ್ಯತೆಯಿದೆ ಮತ್ತು 2040ರ ವೇಳೆಗೆ ಭಾರತದ ಕೊಳ್ಳುವ ಸಾಮರ್ಥ್ಯ ನಿಯಮ(ಪಿಪಿಪಿ) ವಿಶ್ವದಲ್ಲಿಯೇ 2ನೇ ಸ್ಥಾನಕ್ಕೇರಲಿದ್ದು ಅಮೆರಿಕಾವನ್ನು ಹಿಂದಿಕ್ಕಲಿದೆ ಎಂದು ಬಹುರಾಷ್ಟ್ರೀಯ ವೃತ್ತಿಪರ ಸೇವೆಗಳ ಜಾಲ ಪಿಡಬ್ಲ್ಯುಸಿ ಇ7 ಹೇಳಿದೆ.
ಮುಂದಿನ 34 ವರ್ಷಗಳಲ್ಲಿ ಬ್ರೆಝಿಲ್, ಚೀನಾ, ಭಾರತ, ಇಂಡೋನೇಷಿಯಾ, ಮೆಕ್ಸಿಕೋ, ರಷ್ಯಾ ಮತ್ತು ಟರ್ಕಿಯ ಆರ್ಥಿಕತೆ ವಾರ್ಷಿಕವಾಗಿ ಸುಮಾರು 3.5ರಷ್ಟು ಏರಿಕೆಯಾಗಲಿದೆ. ಬೆಳವಣಿಗೆ ಹೊಂದಿದ ದೇಶಗಳಾದ ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಇಂಗ್ಲೆಂಡ್ ಮತ್ತು ಅಮೆರಿಕಾಗಳಲ್ಲಿ ಆರ್ಥಿಕ ಬೆಳವಣಿಗೆ ಶೇಕಡಾ 1.6ರಷ್ಟಿರುತ್ತದೆ.
ಕೊಳ್ಳುವ ಸಾಮರ್ಥ್ಯದಲ್ಲಿ ಚೀನಾ ಈಗಾಗಲೇ ಅಮೆರಿಕಾವನ್ನು ಹಿಂದಿಕ್ಕಿದೆ. ಭಾರತ ಮೂರನೇ ಸ್ಥಾನದಲ್ಲಿದ್ದು 2040ರ ವೇಳೆಗೆ ಅಮೆರಿಕಾವನ್ನು ಹಿಂದಿಕ್ಕಲಿದೆ ಎಂದು ಪಿಡಬ್ಲ್ಯುಸಿ ಹೇಳಿದೆ.ಮುಂದಿನ 30 ವರ್ಷಗಳ ನಂತರ ಭಾರತ, ಬಾಂಗ್ಲಾದೇಶ ಮತ್ತು ವಿಯೆಟ್ನಾಂ ವಿಶ್ವದಲ್ಲಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಾಗಲಿವೆ ಎಂದು ಹೇಳಿದೆ.

Comments are closed.