ರಾಷ್ಟ್ರೀಯ

ನಿಶ್ಚಿತಾರ್ಥಕ್ಕೂ ಮೂರು ದಿನ ಮೊದಲು ಇಡೀ ಕುಟುಂಬವೇ ಆತ್ಮಹತ್ಯೆಗೆ ಶರಣು!

Pinterest LinkedIn Tumblr


ಈರೋಡ್: ಆ ಕುಟುಂಬ ಶುಭಕಾರ್ಯವನ್ನು ನಡೆಸುವ ಸಂಭ್ರಮದಲ್ಲಿತ್ತು. ಮೂರು ದಿನಗಳಲ್ಲಿ ನಡೆಯಲಿದ್ದ ತನ್ನ ನಿಶ್ಚಿತಾರ್ಥದ ತಯಾರಿಯಲ್ಲಿ ಯುವತಿ ವ್ಯಸ್ತವಾಗಿದ್ದಳು. ಆದರೆ ಅಷ್ಟರಲ್ಲಿ ಅವರಿಗೇನಾಯಿತೋ … ಮದುಮಗಳ ಸಮೇತ ಸಂಪೂರ್ಣ ಪರಿವಾರ ಬಾರದ ಲೋಕಕ್ಕೆ ತೆರಳಿದೆ.

ಇನ್ನು ಕೆಲವೇ ದಿನಗಳಲ್ಲಿ ಹೊಸ ಜೀವನವನ್ನು ಪ್ರಾರಂಭಿಸಬೇಕಿದ್ದ ಯುವತಿ ಕೂಡ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಮಿಳುನಾಡಿನ ಈರೋಡ್‌ನಲ್ಲಿ ನಡೆದಿದ್ದು, ಮೃತರನ್ನು ಕೃತಿಗಾ (31) ಆಕೆಯ ತಂದೆ ಮನೋಹರನ್(60) ಮತ್ತು ತಾಯಿ ರಾಧಾಮಣಿ(55) ಎಂದು ಗುರುತಿಸಲಾಗಿದೆ.

ಖಾಸಗಿ ಬ್ಯಾಂಕ್ ಒಂದರಲ್ಲಿ ವ್ಯವಸ್ಥಾಪಕರಾಗಿದ್ದ ಕೃತಿಗಾ ಮತ್ತು ಆಕೆಯ ಪೋಷಕರು ಚಿನ್ನಿಯಮಪಾಳ್ಯಂ ಗ್ರಾಮದಲ್ಲಿ ವಾಸವಾಗಿದ್ದರು. ಗುರುವಾರ ರಾತ್ರಿ ಸಂಪೂರ್ಣ ಪರಿವಾರ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದೆ. ಶುಕ್ರವಾರ ಬೆಳಿಗ್ಗೆ ಹಾಲು ಮಾರುವವನು ಬಂದು ಬಾಗಿಲು ಬಡಿದಾಗ ಯಾರು ಕೂಡ ಬಾಗಿಲು ತೆರೆದಿಲ್ಲವಾದ್ದರಿಂದ ಅವರ ಸಂಬಂಧಿಕರಿಗೆ ಈ ಕುರಿತು ಮಾಹಿತಿ ನೀಡಿದ್ದಾನೆ.

ಧಾವಿಸಿ ಬಂದ ಸಂಬಂಧಿಕರು ಕದ ಒಡೆದು ನೋಡಿದಾಗ ಮೂರು ಜನ ಶವವಾಗಿರುವುದು ಪತ್ತೆಯಾಗಿದೆ. ಸ್ಥಳದಲ್ಲಿ ಮೂರು ಡೆತ್ ನೋಟ್ ಪತ್ತೆಯಾಗಿದ್ದು ಮಾನಸಿಕ ಒತ್ತಡ ಮತ್ತು ಕೆಲ ಗೊಂದಲಗಳ ಹಿನ್ನೆಲೆಯಲ್ಲಿ ತಾವು ಆತ್ಮಹತ್ಯೆಗೆ ಶರಣಾಗುತ್ತಿರುವುದಾಗಿ ಬರೆದಿದ್ದಾರೆ.

Comments are closed.