ರಾಷ್ಟ್ರೀಯ

ಹೊಸ 100 ರೂ. ನೋಟು ಚಲಾವಣೆಗೆ ಬರಲಿದೆ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ

Pinterest LinkedIn Tumblr


ನವದೆಹಲಿ, ಫೆ. ೪- ನೋಟು ರದ್ದತಿ ನಂತರ 500 ಮತ್ತು 2000 ರೂ. ಮುಖಬೆಲೆಯ ಹೊಸ ನೋಟುಗಳನ್ನು ಬಿಡುಗಡೆ ಮಾಡಿದ್ದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 100 ರೂ. ಮುಖಬೆಲೆಯ ಹೊಸ ನೋಟುಗಳನ್ನು ಚಲಾವಣೆಗೆ ತರಲು ಮುಂದಾಗಿದೆ.
ಹೊಸದಾಗಿ ಬಿಡುಗಡೆಯಾಗುವ 100 ರೂ. ಮುಖಬೆಲೆಯ ನೋಟುಗಳು ಪ್ರಸ್ತುತ ಇರುವ ಅಂದರೆ ಮಹಾತ್ಮಗಾಂಧಿ ಸರಣಿಯ 2005ರ ನೋಟುಗಳ ವಿನ್ಯಾಸದಲ್ಲೇ ಹೊಸ ನೋಟುಗಳು ಇರಲಿದ್ದು, ಮುದ್ರಣ ವರ್ಷ ಮಾತ್ರ 2017 ಎಂದು ನೋಟಿನ ಹಿಂಭಾಗದಲ್ಲಿ ಮುದ್ರಣವಾಗಲಿದೆ. ನೋಟಿನ ನಂಬರ್‌ಗಳು ಆರ್ ಸರಣಿಯಿಂದ ಆರಂಭವಾಗಲಿದ್ದು, ನೂತನ ಆರ್‌ಬಿಐ ಗವರ್ನರ್ ಊರ್ಜಿತ್ ಪಟೇಲ್ ಅವರ ಸಹಿಯು ನೋಟಿನ ಮೇಲೆ ಇರಲಿದೆ. ಇದರ ಜೊತೆಗೆ 500 ರೂ. ಮುಖಬೆಲೆಯ ನೋಟಿನಂತೆ 100 ರೂ. ನ ಈ ಹೊಸ ನೋಟಿನ ಗಾತ್ರ ಸಹ ಚಿಕ್ಕದಾಗಿ ಇರಲಿದ್ದು, ನೋಟಿನ ಸುರಕ್ಷತೆಯ ಎಳೆ, ಗುರುತಿನ ಚಿನ್ಹೆಯನ್ನು ಹೊಂದಿರಲಿದೆ.
ಹೊಸ 100 ಮುಖಬೆಲೆಯ ನೋಟುಗಳು ಚಲಾವಣೆಗೆ ಬಂದರೂ, ಹಳೆಯ 100 ರೂ. ನೋಟುಗಳು ಚಲಾವಣೆಯಲ್ಲಿ ಮುಂದುವರೆಯುತ್ತವೆ. ಹಳೆಯ 100 ರೂ. ನೋಟುಗಳನ್ನು ನಿಷೇಧಿಸುವ ಪ್ರಸ್ತಾಪ ಇಲ್ಲ. ಹೊಸ ಹಾಗೂ ಹಳೆಯ 100 ರೂ. ನೋಟುಗಳು ಚಲಾವಣೆಯಲ್ಲಿ ಇರಲಿದೆ ಎಂದು ಆರ್‌ಬಿಐ ಸ್ಪಷ್ಟಪಡಿಸಿದೆ.

Comments are closed.