ರಾಷ್ಟ್ರೀಯ

ಬಜೆಟ್‌: ಉದ್ಯೋಗ ಸೃಷ್ಟಿಸುವ ಅಂಶಗಳಿಲ್ಲ-ರಾಹುಲ್ ಗಾಂಧಿ

Pinterest LinkedIn Tumblr


ನವದೆಹಲಿ: ಇದು ದೂರದೃಷ್ಟಿ ಇಲ್ಲದ ಬಜೆಟ್‌ ಆಗಿದ್ದು ಯುವಕರಿಗೆ ಮತ್ತು ರೈತರಿಗೆ ಉದ್ಯೋಗ ಸೃಷ್ಟಿಸುವ ಯಾವುದೇ ಅಂಶಗಳಿಲ್ಲ ಎಂದು ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್‌ ಗಾಂಧಿ ತಿಳಿಸಿದ್ದಾರೆ.

ಬಜೆಟ್‌ ಮಂಡನೆಯ ಬಳಿಕ ಅವರು ಸಂಸತ್‌ ಆವರಣದ ಹೊರ ಭಾಗದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

ನೋಟು ರದ್ಧತಿ ಬಳಿಕ ದೇಶದ ಜನತೆ ಈ ಬಾರಿಯ ಬಜೆಟ್‌ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಮೋದಿ ಜನರ ನಿರೀಕ್ಷೆಯನ್ನು ಹುಸಿಗೊಳಿಸಿದ್ದಾರೆ ಎಂದು ರಾಹುಲ್‌ ಟೀಕಿಸಿದರು.

ಈ ವರ್ಷದಲ್ಲಿ ಯುವಕರ ಮತ್ತು ರೈತರ ಸಮಸ್ಯೆಗಳು ಮತ್ತಷ್ಟು ಹೆಚ್ಚಾಗಲಿವೆ ಎಂದು ರಾಹುಲ್ ತಿಳಿಸಿದರು.

Comments are closed.