ರಾಷ್ಟ್ರೀಯ

ಗಿಳಿ ಹುಡುಕಿಕೊಟ್ಟವರಿಗೆ 25 ಸಾವಿರ ಬಹುಮಾನ!

Pinterest LinkedIn Tumblr


ತನ್ನ ಮುದ್ದಿನ ಗಿಳಿ ನಾಪತ್ತೆಯಾಗಿರುವುದರಿಂದ ಕಂಗಾಲಾಗಿರುವ ಮಹಿಳೆಯೊಬ್ಬರು ಆ ಅರಗಿಣಿಯನ್ನು ಹುಡುಕಿಕೊಟ್ಟವರಿಗೆ 25 ಸಾವಿರ ರೂಪಾಯಿ ಬಹುಮಾನವನ್ನುಘೋಷಿಸಿದ್ದಾರೆ.
ಬಿಹಾರದ ನಾವಡ ಜಿಲ್ಲೆಯ ಬಬಿತಾ ದೇವಿಯೇ ಈ ಬಹುಮಾನ ಘೋಷಿಸಿದ ಮಹಿಳೆ. ಗಿಳಿ ಜನವರಿ ಮೂರರಂದು ನಾಪತ್ತೆಯಾಗಿದೆ. ಅಂದಿನಿಂದ ಬಬಿತಾ ಸರಿಯಾಗಿ ಊಟವನ್ನೂ ಮಾಡುತ್ತಿಲ್ಲವಂತೆ..!
ಕಳೆದ ಎಂಟು ವರ್ಷಗಳಿಂದ ಕುಟುಂಬ ಸದಸ್ಯರಂತಿದ್ದ ಈ ಗಿಳಿ, ಮುಂಜಾನೆ ಎಚ್ಚರಿಸುವ ಕೆಲಸವನ್ನೂ ಮಾಡುತ್ತಿತ್ತಂತೆ. ಈಗ ಗಿಳಿಯು ನಾಪತ್ತೆಯಾಗಿರುವುದರಿಂದ ಕಂಗಾಲಾಗಿರುವ ಬಬಿತಾ, ತನ್ನ ಮುದ್ದಿನ ಗಿಳಿಯನ್ನು ಹುಡುಕಿ ಕೊಟ್ಟವರಿಗೆ ಬಹುಮಾನ ಘೋಷಿಸಿ ಕರಪತ್ರ ಹಂಚಿದ್ದಾರೆ.
ಆಕೆಯ ಮೂವರು ಮಕ್ಕಳು ಹಾಗೂ ಸಂಬಂಧಿಕರು ಗಿಳಿಯನ್ನು ಹುಡುಕಲು ವಾಟ್ಸ್’ಆ್ಯಪ್’ನಲ್ಲಿ ಅಭಿಯಾನವನ್ನೂ ಆರಂಭಿಸಿದ್ದಾರೆ. ಆದರೆ ಇಲ್ಲಿಯವರೆಗೆ ಆ ಗಿಳಿ ಪತ್ತೆಯಾಗಿಲ್ಲ. ನೀವೊಮ್ಮೆ ಹುಡುಕಿ ಗಿಳಿ ನಿಮಗೆ ಸಿಕ್ಕರೂ ಸಿಗಬಹುದು.

Comments are closed.