ರಾಷ್ಟ್ರೀಯ

ಮುಲಾಯಂ ಸೊಸೆ ಅಪರ್ಣಾ ಯಾದವ್ ಶ್ರೀಮಂತ ಅಭ್ಯರ್ಥಿ

Pinterest LinkedIn Tumblr


ಲಕ್ನೋ, ಜ. ೩೧- ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಿದವರ ಪೈಕಿ ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್ ಕಿರಿಯ ಸೊಸೆ ಅಪರ್ಣಾ ಯಾದವ್ ಅತ್ಯಂತ ಶ್ರೀಮಂತ ಅಭ್ಯರ್ಥಿಯಾಗಿದ್ದಾರೆ.

ಲಕ್ನೋ ದಂಡು ಕ್ಷೇತ್ರದಿಂದ ಎಸ್.ಪಿ. ಅಭ್ಯರ್ಥಿಯಾಗಿರುವ ಅಪರ್ಣಾ ಅವರ ಒಟ್ಟು ಆಸ್ತಿ 23 ಕೋಟಿ ರೂ. ಇದರಲ್ಲಿ ಅವರ ಗಂಡನ ಹೆಸರಿನಲ್ಲಿರುವ 5.25 ಕೋಟಿ ರೂ. ಬೆಲೆಯ ಲ್ಯಾಂಬರ್ಗಿನಿ ಕಾರು ಸೇರಿದೆ. ಅಪರ್ಣಾ ಹೆಸರಲ್ಲಿ ಯಾವುದೇ ವಾಹನ ಇಲ್ಲ. ಕಾರು ಕೊಳ್ಳಲು ಗಂಡ ಪ್ರತೀಕ್ ಬ್ಯಾಂಕ್‌ನಿಂದ 4.5 ಕೋಟಿ ಸಾಲ ಪಡೆದಿದ್ದಾರೆ.

ಅವರ ಬಳಿ 2 ಕೋಟಿ ರೂ. ಬೆಲೆಯ ಚಿನ್ನಾಭರಣವಿದೆ. ಅವರು ವಾರ್ಷಿಕ 50 ಲಕ್ಷ ಆದಾಯ ತೋರಿಸಿದ್ದಾರೆ. ಅವರ ಗಂಡ 1.5 ಕೋಟಿ ಆದಾಯ ಘೋಷಿಸಿದ್ದಾರೆ.

ಇದಲ್ಲದೆ ಪ್ರತೀಕ್ ಹೆಸರಲ್ಲಿ 20 ಕೋಟಿ ರೂ. ಆಸ್ತಿಪಾಸ್ತಿಯಿದೆ ಎಂದು ಪ್ರಮಾಣಪತ್ರ ನೀಡಲಾಗಿದೆ. ಅಪರ್ಣಾ ಅವರಿಗೆ ಒಟ್ಟು 8.5 ಲಕ್ಷ ಸಾಲವಿದ್ದರೆ ಅವರ ಗಂ‌ಡನಿಗೆ 8 ಕೋಟಿ ರೂ. ಸಾಲವಿದೆ. ಇದೆಲ್ಲಾ 81.5 ಲಕ್ಷವನ್ನು ಮಲ ಸೋದರ ಮುಖ್ಯಮಂತ್ರಿ ಅಖಿಲೇಶ್ ಯಾದವ್‌ರಿಂದ ಪಡೆಯಲಾಗಿದೆ.

ಅಪರ್ಣಾ ವಿರುದ್ಧ ಬಿಜೆಪಿಯ ರೀಟಾ ಬಹುಗುಣ ಜೋಷಿ ಲಕ್ನೋ ದಂಡು ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದಾರೆ.

Comments are closed.