ರಾಷ್ಟ್ರೀಯ

ರಾಜಪಥದಲ್ಲಿ ಕಣ್ಮನ ಸೆಳೆದ ರಾಜ್ಯದ ‘ಸ್ತಬ್ಧಚಿತ್ರ’

Pinterest LinkedIn Tumblr


ನವದೆಹಲಿ(ಜ.26): ರಾಜಪಥ್’​ನ ಪಥ ಸಂಚಲನದಲ್ಲಿ ಈ ಬಾರಿ ಜನಪದ ನೃತ್ಯ ಪ್ರಕಾರಗಳ ಸ್ತಬ್ಧಚಿತ್ರ ಪ್ರದರ್ಶನಗೊಂಡಿತು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನೇತೃತ್ವದಲ್ಲಿ ಒಂದು ತಿಂಗಳಿನಿಂದ ಸಿದ್ಧವಾದ ಈ ಸ್ತಬ್ಧಚಿತ್ರದಲ್ಲಿ ಗೊರವರ ಕುಣಿತ, ಡೊಳ್ಳು ಕುಣಿತ, ಸೋಮನ ಕುಣಿತ, ವೀರಗಾಸೆ, ಕಂಸಾಳೆ, ಪೂಜಾ ಕುಣಿತ, ಪಟ್ಟದ ಕುಣಿತ, ಜಗ್ಗಲಗೆ, ದಾಸರಪದ, ನಂದಿಧ್ವಜದಂತಹ ಜನಪದ ಪ್ರಕಾರಗಳು ಇರಲಿವೆ. ರಾಜ್ಯದಿಂದ ಕಲಾವಿದರನ್ನು ಆಯ್ಕೆ ಮಾಡಲಾಗಿದ್ದು, ಕಳೆದ 15 ದಿನಗಳಿಂದ ಅಭ್ಯಾಸ ನಡೆಸಿದ್ದಾರೆ.
ರಾಜ್ಯದ ಪ್ರಸಿದ್ಧ ಕಲಾವಿದರಾದ ಶಶಿಧರ ಅಡಪ ಅವರ ಕೈಚಳಕದಲ್ಲಿ ರಾಜ್ಯದ ಸ್ತಬ್ಧಚಿತ್ರ ನಿರ್ಮಾಣವಾಗಿದ್ದು, ಒಂದು ತಿಂಗಳಿಂದ 25ಕ್ಕೂ ಹೆಚ್ಚು ಕಾರ್ಮಿಕರು ಇದಕ್ಕಾಗಿ ಕೆಲಸ ನಿರ್ವಹಿಸಿದ್ದಾರೆ. ವಿ. ಮನೋಹರ್‌ ಸ್ತಬ್ಧಚಿತ್ರಕ್ಕೆ ಹಿನ್ನೆಲೆ ಸಂಗೀತ, ಅಮರೇಶ್‌ ದೊಡ್ಡಮನಿ ಕಲಾವಿದರ ಉಸ್ತುವಾರಿ ನಡೆಸಿದ್ದಾರೆ. ಸ್ತಬ್ಧಚಿತ್ರದಲ್ಲಿ ಗೊರವರ ಕುಣಿತದ ಪ್ರತಿಮೆ ಎಲ್ಲಕ್ಕಿಂತ ದೊಡ್ಡದಾಗಿ ಬಿಂಬಿಸಿದ್ದು. ಹಿಂದಿನ ಭಾಗದಲ್ಲಿ ಬೃಹದಾಕಾರದ ಸೋಮನ ಕುಣಿತದ ಮುಖವಾಡ ನಿರ್ವಿುಸಲಾಗಿತ್ತು.
ಪರೇಡ್​​​’ನಲ್ಲಿ ನಮ್ಮ ‘ಕಿನ್ನರ ಜೋಗಿ’
ಆಕರ್ಷಕ ವೇಷಭೂಷಣ ಧರಿಸುವ ಕಿನ್ನರ ಜೋಗಿಗಳು ಕರ್ನಾಟಕವನ್ನು ಪ್ರತಿನಿಧಿಸಿದ್ದು, ಜೋಗಿಗಳ ಸಮುದಾಯದಲ್ಲಿ ಸಂಭ್ರಮ ಹೆಚ್ಚಾಗಿದ್ದು, ಜನಪದ ಶೈಲಿ ದೇಶದ ಮುಂದೆ ಅನಾವರಣಗೊಳಿಸಿದ್ದಾರೆ. ಚಿತ್ರದುರ್ಗದ ಚಳ್ಳಕೆರೆ ತಾಲೂಕಿನ ಎನ್ ದೇವರಹಳ್ಳಿಯಲ್ಲಿ ವಾಸವಾಗಿರುವ ಕಿನ್ನರ ಜೋಗಿ ಸಮುದಾಯ, ಆಕರ್ಷಕ ವೇಷ ಧರಿಸಿ, ತಂಬೂರಿ ಹಿಡಿದುಕೊಂಡು ಅಲೆಮಾರಿಗಳಂತೆ ಬದುಕುವ ಸಮುದಾಯ, ಮನೆ ಮನೆಗೂ ಬಂದು ಮಹಾಭಾರತದ ಕಥೆಗಳನ್ನು ಹೇಳುತ್ತಾ ಭೀಕ್ಷೆ ಬೇಡುವ ಸಮುದಾಯ ಈ ಪ್ರದರ್ಶನದ ಪ್ರಮುಖ ಕೇಂದ್ರಬಿಂದುವಾಗಿದ್ದಾರೆ.
ವರ್ಷದಲ್ಲಿ 10 ತಿಂಗಳು ಅಲೆಮಾರಿ ಜೀವನ, ಎರಡು ತಿಂಗಳು ಮಾತ್ರ ಕುಟುಂಬದ ಜೊತೆ ಇವರು ವಾಸವಿರುತ್ತಾರೆ. ಈ ಕಿನ್ನರ ಜೋಗಿ ಸಮುದಾಯದಲ್ಲಿ ಕೇವಲ ಇಬ್ಬರು ಕಲಾವಿದರಿಗೆ ಮಾತ್ರ ಪರೇಡ್​​​’ನಲ್ಲಿ ಭಾಗಿಯಾಗುವ ಅವಕಾಶ ಸಿಕ್ಕಿದೆ. ನೋಡಲು ಆಕರ್ಷಿಸುವಂತಹ ವೇಷ ಭೂಷಣಗಳನ್ನು ಧರಿಸಿ, ಹಣೆಗೆ ವಿಭೂತಿ ಇಟ್ಟುಕೊಳ್ಳುವ ಕಿನ್ನರ ಜೋಗಿಗಳು ಕೈಯಲ್ಲಿ ತಂಬೂರಿಯನ್ನು ಹಿಡಿದು ಮನೆ ಮನೆಗೆ ಬಳಿ ಹೋಗಿ ಮಹಾಭಾರತದ ಕಥೆ ಹೇಳುತ್ತಾರೆ. ಇಂದು ಪ್ರಧಾನಿ, ರಾಷ್ಟ್ರಪತಿ ಮುಂದೆ ಜನಪದ ಕಲಾ ತಂಡಗಳಲ್ಲಿ ಪ್ರತನಿಧಿಸಿದ್ದಾರೆ ಈ ಚಿತ್ರದುರ್ಗದ ಕಿನ್ನರ ಜೋಗಿಗಳು.

Comments are closed.