
ಗೌಹಾಟಿ: ಈಶಾನ್ಯ ಭಾರತದ ಅಸ್ಸಾಂ ಮತ್ತು ಮಣಿಪುರ ರಾಜ್ಯಗಳಲ್ಲಿ 7 ಕಡೆ ಬಾಂಬ್ ಸ್ಫೋಟ ಸಂಭವಿಸಿದ್ದು ಯಾವುದೇ ಪ್ರಾಣಹಾನಿ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.
ಅಸ್ಸಾಂ ರಾಜ್ಯದ ದಿಸ್‌ಪುರ, ಸಿಬಾಸ್‌ಘರ್, ಟಿನುಸ್ಕಿಯ ಮತ್ತು ದಿಬ್ರುಘರ್ ಪಟ್ಟಣಗಳಲ್ಲಿ ಸ್ಫೋಟ ಸಂಭವಿಸಿದ್ದು ಯಾವುದೇ ಪ್ರಾಣಹಾನಿ ಹಾಗೂ ಆಸ್ತಿಪಾಸ್ತಿಗೆ ನಷ್ಟ ಉಂಟಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಮಣಿಪುರ ರಾಜ್ಯದ ಪೂರ್ವ ಇಂಪಾಲ್ ಮತ್ತು ಪಶ್ಚಿಮ ಇಂಪಾಲ್ ನಗರಗಳಲ್ಲೂ ಸ್ಫೋಟ ಸಂಭವಿಸಿದ್ದು 10 ಕ್ಕೂ ಹೆಚ್ಚು ಜನರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಎಂದು ಮಣಿಪುರ ಪೊಲೀಸರು ತಿಳಿಸಿದ್ದಾರೆ.
ಈ ಏಳು ಸರಣಿ ಸ್ಪೋಟಗಳ ಹಿಂದೆ ಉಲ್ಫಾ ಉಗ್ರರ ಕೈವಾಡ ಇರುವುದಾಗಿ ಪೊಲೀಸರು ಶಂಕಿಸಿದ್ದಾರೆ.
Comments are closed.