ರಾಷ್ಟ್ರೀಯ

3 ವರ್ಷವಾದರೂ ನಿರ್ಭಯ ನಿಧಿಯಿಂದ ಒಂದು ಪೈಸೆಯೂ ಖರ್ಚಾಗಿಲ್ಲ..!

Pinterest LinkedIn Tumblr


ನವದೆಹಲಿ(ಜ.26): ಮಹಿಳೆಯರ ಸುರಕ್ಷತೆ ಮತ್ತು ಭದ್ರತೆಗಾಗಿ 2013ರಲ್ಲಿ ಸ್ಥಾಪಿಸಲಾದ ನಿರ್ಭಯಾ ನಿಧಿಯಲ್ಲಿ ಒಂದು ಪೈಸೆಯೂ ಖರ್ಚಾಗಿಲ್ಲ!
ಹೌದು. ಸತತ 3 ವರ್ಷಗಳಿಂದಲೂ ಈ ನಿಧಿಯಲ್ಲಿನ ಒಂದೇ ಒಂದು ಪೈಸೆಯೂ ವೆಚ್ಚವಾಗದೇ ಹಾಗೆಯೇ ಉಳಿದಿದೆ ಎಂಬ ಅಂಶ ಇದೀಗ ಬಹಿರಂಗವಾಗಿದೆ. 2013ರಿಂದ ಈವರೆಗೂ ಪ್ರತಿ ವರ್ಷವೂ ಸರ್ಕಾರ ನಿರ್ಭಯಾ ನಿಧಿಗೆ ₹1 ಸಾವಿರ ಕೋಟಿ ಅನುದಾನ ನೀಡುತ್ತಾ ಬಂದಿದೆ. ಆದರೆ, ಬಂದ ಅನುದಾನವೆಲ್ಲ ಅಲ್ಲೇ ಕೊಳೆತುಹೋಗುತ್ತಿದೆಯೇ ವಿನಾ ಉಪಯೋಗಕ್ಕೆ ಬಂದಿಲ್ಲ.
2012ರ ಡಿಸೆಂಬರ್‌’ನಲ್ಲಿ ದೆಹಲಿಯಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ ಮೃತಪಟ್ಟ ಅರೆವೈದ್ಯಕೀಯ ವಿದ್ಯಾರ್ಥಿನಿಯ ನೆನಪಲ್ಲಿ ಯುಪಿಎ ಸರ್ಕಾರವು ‘ನಿರ್ಭಯಾ ನಿಧಿ’ಯನ್ನು ಸ್ಥಾಪಿಸಿತ್ತು. ಈ ನಿಧಿಗೆ ₹1 ಸಾವಿರ ಕೋಟಿ ಅನುದಾನ ಮೀಸಲಿಡುವ ಯುಪಿಎ ಸಂಪ್ರದಾಯವನ್ನು ಎನ್‌’ಡಿಎ ಕೂಡ ಪಾಲಿಸಿಕೊಂಡ ಬಂದಿದೆ. ಆದರೆ, ಅದರ ಹಣವನ್ನು ಖರ್ಚು ಮಾಡುವ ಯಾವುದೇ ಯೋಜನೆಯನ್ನೂ ಆರಂಭಿಸಲಾಗಿಲ್ಲ. ಮಹಿಳೆಯರ ಸುರಕ್ಷತೆಗಾಗಿ ಕೆಲಸ ಮಾಡುವ ಎನ್’ಜಿಒಗಳಿಗೆ ಈ ನಿಧಿಯಿಂದ ಸಹಾಯಧನ ನೀಡಬಹುದಾದರೂ, 3 ವರ್ಷಗಳಿಂದ ಯಾರೂ ಆ ಕೆಲಸ ಮಾಡಿಲ್ಲ. ಹೀಗಾಗಿ ವರ್ಷ ಕಳೆದಂತೆ ನಿಧಿಯಲ್ಲಿನ ಮೊತ್ತ ಹೆಚ್ಚುತ್ತಿದೆಯೇ ವಿನಾ ಅದು ಯಾರ ಪ್ರಯೋಜನಕ್ಕೂ ಬರುತ್ತಿಲ್ಲ.

Comments are closed.