ರಾಷ್ಟ್ರೀಯ

ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರೀ ಹಿಮಪಾತ: ಯೋಧ ಸೇರಿ ಐವರ ಸಾವು

Pinterest LinkedIn Tumblr

ಶ್ರೀನಗರ: ಕಾಶ್ಮೀರದ ಗಾಂದರ್ಬಲ್‌ನ ಸೋನ್‌ಮಾರ್ಗ್‌ನಲ್ಲಿ ಭಾರೀ ಹಿಮಪಾತ ಸಂಭವಿಸಿದ್ದು ಓರ್ವ ಸೇನಾಧಿಕಾರಿ ಸೇರಿ ಐವರು ನಾಗರಿಕರು ಬಲಿಯಾಗಿರುವ ಬಗ್ಗೆ ವರದಿಯಾಗಿದೆ.

ಬುಧವಾರ ಮಧ್ಯಾಹ್ನ ಸೇನಾ ಕ್ಯಾಂಪ್‌ನ ಮೇಲೆ ಹಿಮದ ಗುಡ್ಡೆಗಳು ಕುಸಿದು ಬಿದ್ದ ಪರಿಣಾಮ ದುರ್ಘ‌ಟನೆ ಸಂಭವಿಸಿದೆ ಎಂದು ವರದಿಯಾಗಿದೆ. ಇನ್ನೊಂದು ಅವಘಡದಲ್ಲಿ ಗಡಿ ನಿಯಂತ್ರಣ ರೇಖೆಯ ಬಳಿಯಿರುವ ಗುರೇಜ್‌ ಸೆಕ್ಟರ್‌ನಲ್ಲಿ ಹಿಮಗಡ್ಡೆ ಮನೆಯ ಮೇಲೆ ಕುಸಿದು ಒಂದೇ ಕುಟುಂಬದ ನಾಲ್ವರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಮೃತರು ಹಬಿಬುಲ್ಲಾ ಲೋನ್‌,ಆತನ ಪತ್ನಿ, ಪುತ್ರ ಮತ್ತು ಪುತ್ರಿ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ಸೇನಾಧಿಕಾರಿಯ ಕಳೇಬರವನ್ನು ಹಿಮದಿಂದ ಹೊರ ತೆಗೆಯಲಾಗಿದೆ ಎಂದು ತಿಳಿದು ಬಂದಿದ್ದು ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ.

ಕಾಶ್ಮೀರದಲ್ಲಿ ವ್ಯಾಪಕ ಹಿಮಪಾತ ಸಂಭವಿಸಿತ್ತಿದ್ದು, ಕನಿಷ್ಠ ತಾಪಮಾನ ಧಿ7 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ. ಸೇನಾ ಕ್ಯಾಂಪ್‌ ಗಳು ಹಿಮದಿಂದ ಆವೃತ್ತವಾಗಿವೆ ಎಂದು ವರದಿಗಳು ತಿಳಿಸಿವೆ.

ಹಿಮ ಪರ್ವತಗಳ ಅಡಿಯಲ್ಲಿದ್ದ 80ಕ್ಕೂ ಹೆಚ್ಚು ಹಳ್ಳಿಗಳ ಜನರನ್ನು ಮುಂಜಾಗೃತ ಕ್ರಮವಾಗಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.

Comments are closed.