
ಉತ್ತರಪ್ರದೇಶ: ಉತ್ತರಪ್ರದೇಶದ ಘೋರಕ್ಪುರದಲ್ಲಿ ಯುವಕನೊಬ್ಬ ಚುಡಾಯಿಸಿದಕ್ಕೆ ಕುಪಿತಳಾದ ಯುವತಿ ಪೊಲೀಸ್ ಠಾಣೆ ಎದುರೇ ಬಟ್ಟೆ ಬಿಚ್ಚಿ ನಿಂತ ಘಟನೆ ಬೆಳಕಿಗೆ ಬಂದಿದೆ.
ಲಭ್ಯವಾದ ಮಾಹಿತಿ ಅನ್ವಯ ‘ಪ್ರತಿದಿನ ಈಕೆ ಸ್ನಾನ ಮಾಡುತ್ತಿದ್ದ ವೇಳೆ ನೆರೆ ಮನೆಯ ಯುವಕ ಸಂದಿಯಿಂದ ಇಣುಕುವುದಲ್ಲದೆ, ಚುಡಾಯಿಸುತ್ತಿದ್ದ. ಈತನ ವರ್ತನೆ ಕಂಡು ಹಲವಾರು ಬಾರಿ ಈಕೆ ಎಚ್ಚರಿಕೆ ನೀಡಿದ್ದಳಾದರೂ ಯುವಕನಿಗೆ ಬುದ್ದೀ ಬಂದಿರಲಿಲ್ಲ. ಇವೆಲ್ಲದರಿಂದ ಬೇಸತ್ತ ಯುವತಿ ಕೊನೆಯ ಪ್ರಯತ್ನವೆಂಬಂತೆ ದೂರು ನೀಡಲು ಪೊಲೀಸ್ ಠಾಣೆಗೆ ತೆರಳಿದ್ದಳು.
ಈ ವೇಳೆ ಠಾಣೆಯ ಗೇಟ್ ಎದುರೇ ಯುವಕನ ತಂದೆಯನ್ನು ನೋಡಿ ಯುವಕನ ನಡವಳಿಕೆಯ ಕುರಿತು ತಿಳಿಸಿದ್ದಾಳೆ. ಆದರೆ ಆತನ ತಂದೆ ಮಾತ್ರ ಮಗನನ್ನು ಸಮರ್ಥಿಸಿಕೊಂಡಿದ್ದು, ಇಬ್ಬರ ನಡುವೆ ಜಗಳವೇರ್ಪಟ್ಟಿದೆ. ಯುವಕನ ತಂದೆಯ ಪ್ರತಿಕ್ರಿಯೆಯಿಂದ ಬೇಸತ್ತ ಯುವತಿ ತನ್ನ ಬಟ್ಟೆ ಬಿಚ್ಚಿದ್ದಾಳೆ’ ಎಂದು ತಿಳಿದು ಬಂದಿದೆ.
ಠಾಣೆ ಎದುರು ನಡೆಯುತ್ತಿದ್ದ ಈ ಪ್ರಸಂಗ ಕಂಡ ಪೊಲೀಸರು ಕೂಡಲೇ ಹೊರಬಂದು ಯುವತಿಗೆ ಬಟ್ಟೆ ತೊಡಿಸಿದ್ದಾರೆ.
Comments are closed.