
ಬೆಂಗಳೂರು: ಜಲ್ಲಿಕಟ್ಟು ಹೋರಾಟ ಯಶಸ್ವಿಯಾದ ಬೆನ್ನಲ್ಲೇ ದಕ್ಷಿಣ ಕನ್ನಡದ ಜಾನಪದ ಕ್ರೀಡೆ ‘ಕಂಬಳ’ದ ಮೇಲಿನ ನಿಷೇಧವನ್ನು ಹಿಂಪಡೆಯುವಂತೆ ಒತ್ತಾಯಿಸಿ ಹೋರಾಟಗಳು ಆರಂಭವಾಗಿವೆ. ಸಾಮಾಜಿಕ ಜಾಲತಾಣಗಳಲ್ಲಿ ಆರಂಭವಾದ ಕಂಬಳ ಪರ ಅಭಿಯಾನ ಬೆಂಗಳೂರಿನ ‘ಫ್ರೀಡಂ ಪಾರ್ಕ್’ಗೆ ಸ್ಥಳಾಂತರಗೊಂಡಿದೆ.
ಇದರ ಅಂಗವಾಗಿ ಭಾನುವಾರ ವಿವಿಧ ಸಂಘಟನೆಗಳ ಸದಸ್ಯರು ಫ್ರೀಡಂ ಪಾರ್ಕ್‌ನಲ್ಲಿ ಸೇರಿದ್ದು, ಕಂಬಳ ಪರ ಘೋಷಣೆ ಕೂಗಿದರು.
ಕಂಬಳ ದಕ್ಷಿಣ ಕನ್ನಡದ ಗ್ರಾಮೀಣ ಬಡ ಜನರ ಕ್ರೀಡೆ. ಇದು, ನಮ್ಮ ಸಂಸ್ಕೃತಿಯೊಂದಿಗೆ ಸಮ್ಮಿಳಿತವಾಗಿದೆ. ಇದನ್ನು ನಿಷೇಧಿಸಿರುವುದು ನಮ್ಮ ಸಂಸ್ಕೃತಿಯ ಮೇಲೆ ನಿರ್ಬಂಧ ಹೇರಿ ಹಕ್ಕನ್ನು ಕಸಿದುಕೊಂಡಂತಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.
ಜಲ್ಲಿಕಟ್ಟು ವಿಚಾರವಾಗಿ ತಮಿಳುನಾಡು ಒಗ್ಗಟ್ಟು ಪ್ರದರ್ಶಿಸಿದ ರೀತಿಯಲ್ಲೇ ಕನ್ನಡಿಗರು ಕಂಬಳದ ಪರ ಒಗ್ಗಟ್ಟು ಪ್ರದರ್ಶಿಸಬೇಕು. ಕೇಂದ್ರ ಸರ್ಕಾರ ಈ ಕೂಡಲೇ ಮಧ್ಯ ಪ್ರವೇಶಿಸಿ, ಜಲ್ಲುಕಟ್ಟು ಬಿಕ್ಕಟ್ಟು ಪರಿಹರಿಸುವಲ್ಲಿ ತೋರಿದ ಆಸಕ್ತಿಯನ್ನು ಕಂಬಳದ ಮೇಲಿನ ನಿಷೇಧ ತೆರವಿಗೂ ತೋರಬೇಕು ಎಂದು ಪ್ರತಿಭಟನಾನಿರತರು ಆಗ್ರಹಿಸಿದರು.
Comments are closed.