ರಾಷ್ಟ್ರೀಯ

ಯುದ್ಧವಾದರೆ ದಿಲ್ಲಿಯನ್ನು ಎರಡೇ ದಿನದಲ್ಲಿ ತಲುಪುತೇವೆ!

Pinterest LinkedIn Tumblr


ನವದೆಹಲಿ(ಜ. 19): ಚೀನಾದ ಸರ್ಕಾರೀ ಸ್ವಾಮ್ಯದ ಟಿವಿ ವಾಹಿನಿಯು ಮೊನ್ನೆಮೊನ್ನೆ ವಿಶೇಷ ವರದಿಯೊಂದನ್ನು ಪ್ರಸಾರ ಮಾಡಿತ್ತು. ಅದರಲ್ಲಿ, ಅದು ಯುದ್ಧದ ಸನ್ನದ್ಧತೆಯ ಕುರಿತು ವಿವರಿಸಿತ್ತು. ಒಂದು ವೇಳೆ ಭಾರತ ಮತ್ತು ಚೀನಾ ನಡುವೆ ಯುದ್ಧ ಶುರುವಾಗಿಬಿಟ್ಟಲ್ಲಿ ಚೀನಾದ ಯಾಂತ್ರೀಕೃತ ಸೇನಾಪಡೆಗಳು 48 ದಿನಗಳಲ್ಲಿ ದಿಲ್ಲಿ ನಗರವನ್ನು ತಲುಪಬಲ್ಲವು. ತಮ್ಮ ದೇಶದ ಅರೆಸೇನಾಪಡೆಗಳು ಕೇವಲ 10 ಗಂಟೆಗಲ್ಲಿ ದಿಲ್ಲಿಗೆ ದೌಡಾಯಿಸಬಲ್ಲವು ಎಂದು ಚೀನಾದ ವಾಹಿನಿ ಹೇಳಿಕೊಂಡಿತ್ತು.
ಚೀನಾದ ಈ ಸಿಲ್ಲಿ ಕಮೆಂಟ್’ಗೆ ಭಾರತದ ಸೇನೆಯಿಂದ ಯಾವುದೇ ಪ್ರತಿಕ್ರಿಯೆ ಹೋಗಲಿಲ್ಲ. ಆದರೆ, ಟ್ವಿಟ್ಟರ್’ನಲ್ಲಿ ಭಾರತೀಯರು ಚೀನಾವನ್ನು ಟ್ರಾಲ್ ಮಾಡಲು ಇದು ಸರಿಯಾಯಿತು. ಕೆಲ ಟ್ವೀಟ್’ಗಳ ಸ್ಯಾಂಪಲ್ ಇಲ್ಲಿದೆ.
“ಚೀನಾ ತನ್ನ ಸೇನಾಪಡೆಗಳನ್ನು ಯಾಂತ್ರೀಕೃತಗೊಳಿಸಲು ‘ಮೇಡ್ ಇನ್ ಚೀನಾ’ ಭಾಗಗಳನ್ನು ಬಳಸಿಲ್ಲವೆಂದು ಆಶಿಸುತ್ತೇನೆ. ಯಾಕೆಂದರೆ, ಹಿಮಾಲಯಗಳಲ್ಲಿ ಅವು ವರ್ಕೌಟ್ ಆಗುವುದಿಲ್ಲ”
“ಚೀನಾ ಸುದ್ದಿ ವಾಹಿನಿಗಳು ಪಾಕಿಸ್ತಾನದ ನ್ಯೂಸ್ ಎಡಿಟರ್’ಗಳನ್ನು ನೇಮಕ ಮಾಡಿಕೊಂಡಿರುವಂತಿದೆ.!!”
“ಭಾರತದ ರಾಜಧಾನಿಯ ಸುತ್ತಲೂ ಭಾರೀ ಟ್ರಾಫಿಕ್ ಜಾಮ್ ಇರುವುದು ಪಾಪ ಚೀನಾಗೆ ಗೊತ್ತಿಲ್ಲ”
“48 ಮತ್ತು 10 ಗಂಟೆ ಕೇಜ್ರಿವಾಲ್ ಅವರ ಧರಣಿಯಲ್ಲಿ ಪಾಲ್ಗೊಳ್ಳಲು ದೌಡಾಯಿಸುತ್ತಾರೆ. ಬಳಿಕ ಅಲ್ಲಿಂದ ತಪ್ಪಿಸಿಕೊಂಡು ಬರುವುದು ಹೇಗೆ ಎಂಬುದೇ ಅವರಿಗೆ ಚಿಂತೆಯಾಗಿರುತ್ತದೆ”
“ದಿಲ್ಲಿಯಲ್ಲಿರುವ ಹಿಮದ ಮೇಲೆ ಅವಲಂಬಿತವಾಗಿರುತ್ತದೆ”
“ಡಿಯರ್ ಚೀನಾ, ಸೋಮನಾಥ್ ಭಾರ್ತಿಯವರ ನಾಯಿಗಳು, ಕೇಜ್ರಿವಾಲ್’ರ ಟ್ವೀಟ್’ಗಳು, ಅಶುತೋಷ್’ರ ಇಂಗ್ಲೀಷು ದಿಲ್ಲಿಗೆ ಕಾವಲಾಗಿವೆ. ಒಂದು ಹೆಜ್ಜೆ ಮುಂದಿಡುವ ಮುನ್ನ ನೂರೆಂಟು ಬಾರಿ ಯೋಚಿಸಿ”
“ರಾವ್ ತುಲಾ ರಾಮ್ ಫ್ಲೈಓವರ್ ನೋಡಿದ್ದೀರಾ? ದಿಲ್ಲಿಯ ಔಟರ್ ರಿಂಗ್ ರೋಡ್ ನೋಡಿದ್ದೀರಾ? ಹಹ್ಹಹ್ಹಾ… 48 ಗಂಟೆ, ನಿಮ್ಮ ಕನಸ್ಸಲ್ಲಿರಬೇಕು”
“ಚೀನಾದವರು ಇಷ್ಟು ಅಸಮರ್ಥರೇ? ಭಾರತದ ತುಕಡಿಗಳು ಆರೇ ಗಂಟೆಯಲ್ಲಿ ಬೀಜಿಂಗ್ ತಲುಪಬಲ್ಲವು. ಆದರೆ ಎರಡೂ ಕಡೆಯ ಸಮಸ್ಯೆ ಎಂದರೆ, ಅಲ್ಲಿಗೆ ತಲುಪಿದಾಗ ಏನಾಗುತ್ತದೆ ಎಂಬುದು.”

Comments are closed.