ಕ್ರೀಡೆ

ಒಲಿಂಪಿಕ್ ವಿಜೇತನನ್ನೇ ಸೋಲಿಸಿದ ರಾಮ್’ದೇವ್!

Pinterest LinkedIn Tumblr


ನವದೆಹಲಿ(ಜ.19): ಇತ್ತೀಚೆಗಷ್ಟೇ ಫುಟ್ಬಾಲ್‌ ಆಡಿ ಗಮನ ಸೆಳೆದಿದ್ದ ಯೋಗ ಗುರು ಬಾಬಾ ರಾಮ್‌ದೇವ್‌ ಇದೀಗ ಕುಸ್ತಿ ಅಖಾಡದಲ್ಲೂ ತಮ್ಮ ಪವರ್ ತೋರಿಸಿದ್ದಾರೆ. ಅದು ಅಂತಿಂಥವರೊಂದಿಗೆ ಅಲ್ಲ, 2008ರ ಒಲಿಂಪಿಕ್ಸ್‌ನಲ್ಲಿ ಭಾರತ ಸುಶೀಲ್‌ ಕುಮಾರ್‌ರನ್ನು ಮಣಿಸಿದ ಪ್ರಬಲ ಎದುರಾಳಿ ಆ್ಯಂಡ್ರೆ ಸ್ಟಾಡ್ನಿಕ್‌ ರನ್ನೇ ರಾಮ್​​ದೇವ್ ನೆಲಕ್ಕುರುಳಿಸಿದ್ದಾರೆ.
ಬುಧವಾರ ಪ್ರೊ ಕುಸ್ತಿ ಲೀಗ್‌’ನ 2ನೇ ಸೆಮಿಫೈನಲ್‌ ಪಂದ್ಯದ ವೇಳೆ ನಡೆದ ಸೌಹಾರ್ದ ಪಂದ್ಯದಲ್ಲಿ ರಾಮ್‌’ದೇವ್‌ ತಮ್ಮ ಪವರ್‌ ತೋರಿಸಿದರು. ಒಲಿಂಪಿಕ್ಸ್‌ ಪದಕ ವಿಜೇತನನ್ನು 12-0 ಅಂತರದಿಂದ ಆ್ಯಂಡ್ರೆ ಸ್ಟಾಡ್ನಿಕ್‌ ರನ್ನು ಸೋಲಿಸಿದರು. ಯೋಗದಲ್ಲಿ ಎಷ್ಟು ಶಕ್ತಿ ಇದೆ ಎನ್ನುವುದನ್ನು ತೋರಿಸುವ ಸಲುವಾಗಿ ಒಲಿಂಪಿಕ್ಸ್‌ ಪದಕ ವಿಜೇತನ ವಿರುದ್ಧ ಹೋರಾಡಿದೆ ಎಂದು ರಾಮ್‌ದೇವ್‌ ತಿಳಿಸಿದ್ದಾರೆ.

Comments are closed.