ರಾಷ್ಟ್ರೀಯ

ಝಾಕಿರ್‌ ನಾಯ್ಕ್‌ 78 ಬ್ಯಾಂಕ್‌ ಖಾತೆಗಳ ಪರಿಶೀಲನೆ!

Pinterest LinkedIn Tumblr


ನವದೆಹಲಿ: ವಿವಾದಿತ ಧರ್ಮ ಪ್ರಚಾರಕ ಡಾ. ಝಾಕಿರ್ ನಾಯ್ಕ್‌ ಹಾಗೂ ಅವರ ಸಹವರ್ತಿಗಳಿಗೆ ಸಂಬಂಧಿಸಿದ 78 ಬ್ಯಾಂಕ್‌ ಖಾತೆಗಳು, ₹100 ಕೋಟಿಯಷ್ಟು ರಿಯಲ್‌ ಎಸ್ಟೇಟ್‌ ಹೂಡಿಕೆ ಬಗ್ಗೆ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಪರಿಶೀಲಿಸುತ್ತಿದೆ.

ಝಾಕಿರ್ ನಾಯ್ಕ್‌ ವಿರುದ್ಧ ಭಯೋತ್ಪಾದನೆ ತಡೆ ಕಾನೂನುಗಳ ಅಡಿ ಪ್ರಕರಣ ದಾಖಲಿಸಿ ಎನ್‌ಐಎ ತನಿಖೆ ನಡೆಸುತ್ತಿದೆ. ನಾಯಕ್‌ ಹಾಗೂ ಆತನ ಸಹವರ್ತಿ ಸಂಸ್ಥೆಗಳು ₹100 ಕೋಟಿಗೂ ಅಧಿಕ ಹಣವನ್ನು ಮುಂಬೈ ರಿಯಲ್‌ ಎಸ್ಟೇಟ್‌ ಉದ್ಯಮದಲ್ಲಿ ತೊಡಗಿಸಿರುವ ಬಗ್ಗೆ ಹಾಗೂ ದೇಶದ ವಿವಿಧ ಬ್ಯಾಂಕ್‌ಗಳ 78 ಖಾತೆಗಳಲ್ಲಿ ನಡೆಸಿರುವ ವಹಿವಾಟು ವಿವರ ಪರಿಶೀಲಿಸಲಾಗುತ್ತಿದೆ ಎಂದು ಎನ್‌ಐಎ ಮೂಲಗಳು ತಿಳಿಸಿವೆ.

ಕೋಮುವಾದ ಮತ್ತು ಭಯೋತ್ಪಾದನೆ ಪ್ರಚೋದಕ ಭಾಷಣಗಳನ್ನು ಪ್ರಸ್ತುತ ಪಡಿಸಿರುವ ಆರೋಪದಡಿ ಕಳೆದ ವರ್ಷ ನವಂಬರ್ ನಲ್ಲಿ ಎನ್‌ಐಎ ಜಾಕಿರ್‌ ನಾಯಕ್‌ ವಿರುದ್ಧ ಪ್ರಕರಣ ದಾಖಲಿಸಿತ್ತು.

78 ಬ್ಯಾಂಕ್‌ ಖಾತೆಗಳ ಕೂಲಂಕಷ ಮಾಹಿತಿ ಪರಿಶೀಲಿಸಿ ನಂತರ ವಿದೇಶದಲ್ಲಿರುವ ಜಾಕಿರ್‌ ನಾಯಕ್‌ರನ್ನು ವಿಚಾರಣೆಗೆ ಗುರಿಪಡಿಲಾಗುವುದು ಎಂದು ಎನ್‌ಐಎ ಅಧಿಕಾರಿಗಳು ತಿಳಿಸಿದ್ದಾರೆ.

ನಾಯಕ್‌ ಒಡೆತನದ ಇಸ್ಲಾಮಿಕ್‌ ರಿಸರ್ಚ್‌ ಫೌಂಡೇಷನ್‌ (ಐಆರ್‌ಎಫ್‌) ಸಂಸ್ಥೆಯನ್ನು ಕಾನೂನುಬಾಹಿರ ಚಟುವಟಿಕೆ ಕಾಯ್ದೆ ಅಡಿ ಕೇಂದ್ರ ಸರ್ಕಾರ ನಿಷೇಧ ಹೇರಿದೆ.

ಜಾಕಿರ್‌ ಅವರ ಸಂಸ್ಥೆಯು ಪೀಸ್‌ ಟಿವಿ ಹಾಗೂ ಕೆಲ ಅಂತರರಾಷ್ಟ್ರೀಯ ಮಾಧ್ಯಮಗಳಲ್ಲಿ ಪ್ರಚೋದನಕಾರಿ ಭಾಷಣದ ಮೂಲಕ ಉಗ್ರವಾದಕ್ಕೆ ಸೆಳೆಯುವ ಯತ್ನ ನಡೆದಿದೆ ಎಂದು ಕೇಂದ್ರ ಗೃಹ ಇಲಾಖೆ ಮೂಲಗಳು ತಿಳಿಸಿದ್ದವು.

Comments are closed.