ರಾಷ್ಟ್ರೀಯ

ತಮಿಳುನಾಡಿನಾದ್ಯಂತ ಜಲ್ಲಿಕಟ್ಟು ನಿಷೇಧದ ವಿರುದ್ಧ ಪ್ರತಿಭಟನೆ

Pinterest LinkedIn Tumblr

ಚೆನ್ನೈ: ಜಲ್ಲಿಕಟ್ಟು ನಿಷೇಧ ವಿರೋಧಿಸಿ ತಮಿಳುನಾಡಿನಾದ್ಯಂತ ಪ್ರತಿಭಟನೆಗಳು ನಡೆದು ಬರುತ್ತಿವೆ. ಪೊಂಗಲ್ ಹಬ್ಬದ ನಂತರ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದ್ದು ಮದುರೈ, ಚೆನ್ನೈ, ಸೇಲಂ ಮತ್ತು ಕೊಯಂಬತ್ತೂರಿನಲ್ಲಿ ಸಾವಿರಕ್ಕೂ ಹೆಚ್ಚು ಮಂದಿ ಈ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.

ಪೊಂಗಲ್ ಹಬ್ಬದ ಮಾರನೇ ದಿನ ಮದುರೈನಲ್ಲಿ ಪ್ರತಿಭಟನೆ ಆರಂಭವಾಗಿದ್ದು, ನಂತರ ತಮಿಳುನಾಡಿನ ವಿವಿಧ ಪ್ರದೇಶಗಳಿಗೆ ಪ್ರತಿಭಟನೆಯ ಕಾವು ಹಬ್ಬಿತ್ತು.

ಮಂಗಳವಾರ ಬೆಳಗ್ಗೆ ತಮಿಳುನಾಡು ಪೊಲೀಸರು 200ಕ್ಕಿಂತ ಹೆಚ್ಚು ಪ್ರತಿಭಟನಾಕಾರರನ್ನು ಬಂಧಿಸಿದ್ದಾರೆ.

ಜಲ್ಲಿಕಟ್ಟು ನಿಷೇಧದ ವಿರುದ್ಧ ನಡೆದು ಬರುತ್ತಿರುವ ಪ್ರತಿಭಟನೆಯನ್ನು ಕೊನೆಗೊಳಿಸಲು ಮಂಗಳವಾರ ರಾತ್ರಿ ತಮಿಳುನಾಡು ರಾಜ್ಯ ಸಚಿನ ಡಿ.ಜಯಕುಮಾರ್ ಅವರು ನಡೆಸಿದ ಮಾತುಕತೆ ವಿಫಲವಾಗಿದ್ದು, ಬುಧವಾರ 5,000ಕ್ಕಿಂತಲೂ ಹೆಚ್ಚು ಪ್ರತಿಭಟನಾಕಾರರು ಮರೀನಾ ಬೀಚ್‍ನಲ್ಲಿ ಸೇರಿದ್ದಾರೆ.

ಜಲ್ಲಿಕಟ್ಟು ಆಯೋಜಿಸಲು ಅವಕಾಶ ನೀಡಬೇಕು, ಪ್ರಾಣಿ ದಯಾ ಸಂಘಟನೆ (ಪೇಟಾ) ನಿಷೇಧಿಸಬೇಕು ಮತ್ತು ಬರ ಪೀಡಿತ ಪ್ರದೇಶದ ರೈತರಿಗೆ ಪರಿಹಾರ ನೀಡಬೇಕು- ಈ ಎಲ್ಲ ಬೇಡಿಕೆಗಳನ್ನು ಪೂರೈಸಿದರೆ ಮಾತ್ರ ತಾವು ಪ್ರತಿಭಟನೆ ಕೈ ಬಿಡುವುದಾಗಿ ಪ್ರತಿಭಟನಾಕಾರರು ಹೇಳಿದ್ದಾರೆ.

ಐಟಿ ಉದ್ಯೋಗಿಗಳು, ಕಾರ್ಮಿಕರು, ವಿದ್ಯಾರ್ಥಿಗಳೆಲ್ಲರೂ ಸೇರಿ ಮರೀನಾ ಬೀಚ್‍ನಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ತಮಿಳುನಾಡು ಮುಖ್ಯಮಂತ್ರಿ ಒ. ಪನ್ನೀರ್ ಸೆಲ್ವಂ ಅವರ ಆಶ್ವಾಸನೆಗಾಗಿ ಕಾಯುತ್ತಿದ್ದಾರೆ.

ತಮಿಳು ಸಿನಿಮಾ ನಟರಾದ ವಿಜಯ್, ಸಿಂಬು, ಸೂರ್ಯ ಸೇರಿದಂತೆ ನಿರ್ದೇಶಕರಾದ ಅಮೀರ್, ಕಾರ್ತಿಕ್ ಸುಬ್ಬರಾಜ್ ಮೊದಲಾದವರು ಈ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ.

ನಯನ್‍ತಾರಾ ಟ್ರೆಂಡಿಂಗ್: ಟ್ವಿಟರ್‍ ನಲ್ಲಿ ಜಲ್ಲಿಕಟ್ಟು ಎಂಬ ಪದ ಟ್ರೆಂಡಿಂಗ್ ಆಗುವುದರ ಜತೆಗೆ ಬಹುಭಾಷಾ ನಟಿ ನಯನ್‍ತಾರಾ ಹೆಸರು ಕೂಡಾ ಟ್ರೆಂಡಿಂಗ್ ಆಗುತ್ತಿದೆ. ಜಲ್ಲಿಕಟ್ಟು ಸ್ಪರ್ಧೆಗೆ ಬೆಂಬಲ ಸೂಚಿಸಿ ನಯನ್ ತಾರಾ ಪ್ರಕಟಣೆ ನೀಡಿದ್ದು, ನಯನ್‍ತಾರಾ ಅವರ ಈ ನಿಲುವಿಗೆ ತಮಿಳುನಾಡು ಜನತೆ ಜೈಕಾರ ಕೂಗಿದೆ.

View image on TwitterView image on Twitter
Follow
Sir Ravindra Jadeja @SirJadeja
Actress #Nayanthara Comes In Support Of #Jallikattu. Issues Official Statement For #JusticeforJallikattu . #SaveOurCultureJALLIKATTU
2:55 PM – 18 Jan 2017
461 461 Retweets 1,042 1,042 likes
#jallikattu ಪದದ ಜತೆಗೆ #JusticeforJallikattu #SaveOurCultureJALLIKATTU ಎಂಬುದು ಸಾಮಾಜಿಕ ತಾಣದಲ್ಲಿ ಟ್ರೆಂಡ್ ಆಗಿದೆ.

Comments are closed.