ರಾಷ್ಟ್ರೀಯ

ಬ್ಯಾಂಕ್ ಮತ್ತು ಎಟಿಎಂನಿಂದ ಹಣ ಪಡೆಯುವ ಮಿತಿಯನ್ನು ಹೆಚ್ಚಳಕ್ಕೆ ಆರ್‌ಬಿಐ ನಿರ್ಧಾರ

Pinterest LinkedIn Tumblr


ನವದೆಹಲಿ, ಜ.೧೬: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಈ ವಾರ ಜನಸಾಮಾನ್ಯರಿಗೆ ಸಿಹಿ ಸುದ್ದಿ ನೀಡುವ ಸಾಧ್ಯತೆ ಇದೆ.
ಬ್ಯಾಂಕ್ ಮತ್ತು ಎಟಿಎಂನಿಂದ ನಗದು ಹಿಂಪಡೆಯಲು ವಿಧಿಸಿದ್ದ ಮಿತಿಯನ್ನು ಆರ್‌ಬಿಐ ಹೆಚ್ಚಳ ಮಾಡಲು ನಿರ್ಧರಿಸಿದೆ. ಇದರಿಂದ ಈಗಾಗಲೇ ಹಣದ ಕೊರತೆಯಿಂದ ತೊಂದರೆಗೊಳಗಾಗಿದ್ದ ಸಾರ್ವಜನಿಕರಿಗೆ ಇದರಿಂದ ಅನುಕೂಲವಾಗಲಿದೆ.

ಮೂಲಗಳ ಪ್ರಕಾರ ೨೪ ಸಾವಿರ ರೂಪಾಯಿ ಬದಲು ೩೫ರಿಂದ ೪೦ ಸಾವಿರ ರೂಪಾಯಿ ಹಣ ಹಿಂಪಡೆಯಲು ಅವಕಾಶ ನೀಡುವ ಸಾಧ್ಯತೆ ಇದೆ. ಇದರಿಂದ ಸ್ವಲ್ಪ ಪ್ರಮಾಣದಲ್ಲಿ ಜನರ ಸಂಕಷ್ಟ ನಿವಾರಣೆಯಾಗಲಿದೆ.
ಹೊಸ ನೋಟುಗಳ ಮುದ್ರಣ ನಡೆಯುತ್ತಿದ್ದು, ಮಾರುಕಟ್ಟೆಯಲ್ಲಿ ಹೊಸ ೫೦೦ ಹಾಗೂ ೨ ಸಾವಿರ ಮುಖ ಬೆಲೆಯ ನೋಟುಗಳ ಲಭ್ಯತೆ ಇದ್ದು, ಹಾಗಾಗಿ ಆರ್‌ಬಿಐ ಮಿತಿಯನ್ನು ಹೆಚ್ಚಳ ಮಾಡಲಿದೆ. ಬಜೆಟ್ ಅಧಿವೇಶನದ ವೇಳೆ ವಿರೋಧಿಗಳ ಕೆಂಗಣ್ಣಿಗೆ ಗುರಿಯಾಗುವುದನ್ನು ತಪ್ಪಿಸಿಕೊಳ್ಳಲು ಮಿತಿ ಹೆಚ್ಚಳಕ್ಕೆ ಕೇಂದ್ರ ಸರ್ಕಾರ ಕೂಡ ಒಪ್ಪಿಗೆ ನೀಡಿದೆ ಎಂದು ತಿಳಿದುಬಂದಿದೆ.
ನ.೮ರಂದು ಗರಿಷ್ಠ ಮುಖಬೆಲೆಯ ನೋಟು ಅಮಾನ್ಯಗೊಳಿಸಿದ ಬಳಿಕ ಬ್ಯಾಂಕುಗಳಿಂದ ಹಣ ಪಡೆಯುವ ಮಿತಿಯನ್ನು ಕಡಿಮೆ ಮಾಡಲಾಗಿತ್ತು.

Comments are closed.