ರಾಷ್ಟ್ರೀಯ

ಕ್ಯಾಲೆಂಡರ್‌ನಲ್ಲಿ ಪ್ರಧಾನಿ ಮೋದಿಯ ಫೋಟೋಗೆ ಅನುಮತಿಯಿಲ್ಲ

Pinterest LinkedIn Tumblr


ನವದೆಹಲಿ, ಜ. ೧೬- ಖಾದಿ ಗ್ರಾಮೋದ್ಯೋಗ ಆಯೋಗದ (ಕೆವಿಐಸಿ) ಕ್ಯಾಲೆಂಡರ್ ಮೇಲೆ ಪ್ರಧಾನ ಮಂತ್ರಿ ಮೋದಿ ಅವರ ಚಿತ್ರ ಮುದ್ರಿಸಿರುವುದರಿಂದ ಇರಿಸು ಮುರಿಸುಗೊಂಡಿರುವ ಪ್ರಧಾನ ಮಂತ್ರಿಗಳ ಕಛೇರಿ (ಪಿಎಂಒ) ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಗಳ ಸಚಿವಾಲಯದಿಂದ ಸ್ಪಷ್ಟನೆ ಕೇಳಿದೆ.

ಕೆವಿಐಸಿ ಕ್ಯಾಲೆಂಡರಿನಲ್ಲಿ ಪ್ರಧಾನಿಯವರ ಚಿತ್ರ ಬಳಸಲು ಯಾವುದೇ ಅನುಮತಿ ಪಡೆದಿಲ್ಲ ಎಂದು ಇದಕ್ಕೆ ಮುನ್ನ ಪಿಎಂಒ ವಾದಿಸಿತ್ತು.

ಈ ವಿವಾದಾತ್ಮಕ ವಿಷಯಕ್ಕೆ ಸಂಬಂಧಿಸಿದಂತೆ ಪ್ರಧಾನಿಯವರು ತಮ್ಮ ಅಸಂತೋಷವನ್ನು ಸ್ಪಷ್ಟವಾಗಿ ತೋರ್ಪಡಿಸಿಕೊಂಡಿದ್ದರು.

ಕ್ಯಾಲೆಂಡ್‌ರನಲ್ಲಿ ಪ್ರಧಾನಿ ಚಿತ್ರವಿರುವುದಕ್ಕೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್‌ಗಾಂಧಿ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸರ್ಕಾರವನ್ನು ಕಟುವಾಗಿ ಟೀಕಿಸಿದ್ದರು.

`ಪ್ರಧಾನಿಯವರನ್ನು ಸಂತುಷ್ಟಗೊಳಿಸಲು ಕೆಲವರು ಸ್ವಪ್ರೇರಣೆಯಿಂದ ಇಂಥ ಕೆಲಸ ಮಾಡುತ್ತಿರುವುದು ಹೊಸದೇನಲ್ಲ` ಎಂದು ಉನ್ನತಾಧಿಕಾರಿಯೊಬ್ಬರು ಹೇಳಿದ್ದಾರೆ.

ಜಿಯೋ ಮತ್ತು ಪೇಟಿಯಂನಲ್ಲೂ ಪ್ರಧಾನಿಯವರ ಚಿತ್ರ ಬಳಸುವಾಗಲೂ ಅವರ ಅನುಮತಿ ಪಡೆದಿರಲಿಲ್ಲ ಎಂದೂ ಅವರು ಹೇಳಿದ್ದಾರೆ.

Comments are closed.