ರಾಷ್ಟ್ರೀಯ

ದಾವೂದ್ ಇಬ್ರಾಹಿಂ ಶಿಷ್ಯನ ಬಂಧನಕ್ಕೆ ಚೀನಾ ಅಡ್ಡಗಾಲು

Pinterest LinkedIn Tumblr

dawood
ನವದೆಹಲಿ, ಜ. ೧೨- ಥಾಯ್ಲೆಂಡ್‌ನಲ್ಲಿ ಛೋಟಾ ರಾಜನ್ ಮೇಲೆ ಗುಂಡು ಹಾರಿಸಿದ್ದ ದಾವೂದ್ ಇಬ್ರಾಹಿಂ ಗ್ಯಾಂಗ್‌ನ ಸದಸ್ಯನೊಬ್ಬನನ್ನು ಪಾಕಿಸ್ತಾನದ ಆಗ್ರಹದ ಮೇರೆಗೆ ಭಾರತಕ್ಕೊಪ್ಪಿಸುವ ಯತ್ನಕ್ಕೆ ಚೀನಾ ಅಡ್ಡಗಾಲು ಹಾಕುತ್ತಿದೆ ಎಂದು ಮೂಲಗಳು ತಿಳಿಸಿವೆ.
17 ವರ್ಷಗಳ ಹಿಂದೆ ಬ್ಯಾಂಕಾಕ್‌ನಲ್ಲಿ ದಾವೂದ್‌ನ ಪ್ರತಿಸ್ಪರ್ಧಿ ಛೋಟಾ ರಾಜನ್ ಮೇಲೆ ಗುಂಡು ಹಾರಿಸಿದ ಆರೋಪದ ಮೇಲೆ ಬಂಧಿಸಲಾದ ಶೂಟರ್ ಮುನ್ನಾಜಿಂಗಾಡಾ ಎಂಬುವನು ಥಾಯ್ಲೆಂಡ್‌ನ ಜೈಲಿನಲ್ಲಿದ್ದಾನೆ. ಸ್ವತಃ ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲಿ ಅಡಗಿ ಕುಳಿತಿದ್ದಾನೆ.
ಮುನ್ನಾನನ್ನು ವಶಕ್ಕೆ ಪಡೆಯಲು ಮುಂಬೈ ಪೊಲೀಸರ ಹಲವಾರು ತಂಡಗಳು ಥಾಯ್ಲೆಂಡ್‌ಗೆ ತೆರಳಿವೆ. ಆದರೆ ಥಾಯ್ ಸರ್ಕಾರ ಭಾರತದೊಡನೆ ಸಹಕರಿಸುತ್ತಿಲ್ಲ.
ಮುನ್ನಾನ ಗಡಿಪಾರಿನ ವಿಷಯ ಥಾಯ್ಲೆಂಡಿನ ನ್ಯಾಯಾಲಯವೊಂದರಲ್ಲಿ ಎಳೆಯುತ್ತಿದೆ.
ಛೋಟಾ ರಾಜನ್‌ನನ್ನು ಮುಗಿಸಲು 2000 ದಲ್ಲಿ ಮುನ್ನ ಬ್ಯಾಂಕಾಕ್‌ಗೆ ಹೋದ. ಡಿ- ಕಂಪನಿ ಸಹಾಯದಿಂದ ಅವನಿಗೆ ಪಾಸ್‌ಪೋರ್ಟ್ ಪಡೆಯಲು ಸಾಧ್ಯವಾಗಿತ್ತು. ಮುನ್ನಾ ಪಾಕಿಸ್ತಾನದ ಪೌರ ಎಂದು ಪಾಸ್‌ಪೋರ್ಸ್‌ನಲ್ಲಿ ನಮೂದಿಸಲಾಗಿದೆ.
ಆದರೆ ಮುನ್ನಾ ಮೂಲತಃ ಮುಂಬೈನ ಯೋಗಶ್ವರಿ ಪ್ರದೇಶದ ನಿವಾಸಿ. ಅವನು ಎಲ್ಲಿಯವನು ಎಂಬುದನ್ನು ಸಾಬೀತುಪಡಿಸುವ ಸಾಕ್ಷ್ಯಾಧಾರಗಳನ್ನು ಥಾಯ್ ಪೊಲೀಸರಿಗೆ ಮುಂಬೈ ಪೊಲೀಸರು ನೀಡಿದ್ದಾರೆ.
ಜೈಷ್- ಎ- ಮೊಹಮ್ಮದ್ ನಾಯಕ ಮಸೂದ್ ಅಜರ್‌ನನ್ನು ಭಯೋತ್ಪಾದಕನ ವಿಶ್ವಸಂಸ್ಥೆ ಪಟ್ಟಿಗೆ ಸೇರಿಸಲು ಅಡ್ಡಗಾಲು ಹಾಕಿದ್ದ ಚೀನಾ ಈಗ ಮುನ್ನಾ ವಿಷಯದಲ್ಲೂ ಹಾಗೇ ವರ್ತಿಸುತ್ತಿದೆ.

Comments are closed.