ರಾಷ್ಟ್ರೀಯ

ಚಿತ್ರಮಂದಿರವೊಂದರಲ್ಲಿ ರಾಷ್ಟ್ರಗೀತೆ ಪ್ರಸಾರವಾಗುತ್ತಿದ್ದಾಗ ಎದ್ದು ನಿಲ್ಲದ ಕುಟುಂಬವೊಂದರ ಮೇಲೆ ಯುವಕರ ಗುಂಪೊಂದು ಹಲ್ಲೆ

Pinterest LinkedIn Tumblr

ಚೆನ್ನೈ: ಚೆನ್ನೈ ಚಲನ ಚಿತ್ರೋತ್ಸವದ ವೇಳೆ ಚಿತ್ರಮಂದಿರವೊಂದರಲ್ಲಿ ರಾಷ್ಟ್ರಗೀತೆ ಪ್ರಸಾರವಾಗುತ್ತಿದ್ದಾಗ ಎದ್ದು ನಿಲ್ಲದ ಕುಟುಂಬವೊಂದರ ಮೇಲೆ ಯುವಕರ ಗುಂಪೊಂದು ಹಲ್ಲೆ ಮಾಡಿದೆ.

ಚೆನ್ನೈನಲ್ಲಿ ರಾಷ್ಟ್ರಗೀತೆಗೆ ಅಗೌರವ ತೋರಿದ ಎರಡನೇ ಪ್ರಕರಣ ಇದಾಗಿದ್ದು ರಾಷ್ಟ್ರಗೀತೆ ಪ್ರಸಾರ ವೇಳೆ ಎದ್ದು ನಿಲ್ಲದ ಕೆಲ ಯುವಕರ ಮೇಲೆ ಗುಂಪೊಂದು ಹಲ್ಲೆಗೆ ಯತ್ನಿಸಿತ್ತು. ಅದೇ ರೀತಿ ವಡಾಪಲಾನಿಯ ಫೋರಂ ಮಾಲ್ ನಲ್ಲಿ ಚಿತ್ರವೀಕ್ಷಣೆಗೆ ಬಂದಿದ್ದ ತಾಯಿ ಹಾಗೂ ಇಬ್ಬರು ಮಕ್ಕಳ ಮೇಲೆ ಗುಂಪೊಂದು ಹಲ್ಲೆ ಮಾಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಚಲನ ಚಿತ್ರೋತ್ಸವದ ವೇಳೆ ಬಲ್ಗೇರಿಯಂ ಚಿತ್ರವೊಂದು ಪ್ರದರ್ಶನಕ್ಕೆ ಸಿದ್ದವಾಗಿತ್ತು. ಇದಕ್ಕೂ ಮುನ್ನ ರಾಷ್ಟ್ರಗೀತೆ ಪ್ರಸಾರ ಮಾಡಲಾಗಿತ್ತು ಆದರೆ ಈ ವೇಳೆ ತಾಯಿ, ಪುತ್ರಿ ಮತ್ತು ಪುತ್ರ ಎದ್ದು ನಿಲ್ಲದ ಕಾರಣ ಅವರೊಂದಿಗೆ ಗುಂಪು ವಾಗ್ವಾದಕ್ಕೆ ಇಳಿದೆ. ನಂತರ ಸ್ಥಳಕ್ಕೆ ಬಂದ ಪೊಲೀಸರು ಮಹಿಳೆ ಮತ್ತು ಗುಂಪಿನ ಸದಸ್ಯರನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದರು.

ನವೆಂಬರ್ 30 ಸುಪ್ರೀಂಕೋರ್ಟ್ ದೇಶದ ಪ್ರತಿಯೊಂದು ಚಿತ್ರಮಂದಿರದಲ್ಲೂ ಚಿತ್ರ ವೀಕ್ಷಣೆಗೂ ಮೊದಲು ರಾಷ್ಟ್ರಗೀತೆ ಪ್ರಸಾರ ಮಾಡಬೇಕು ಎಂದು ಆದೇಶ ಹೊರಡಿಸಿತ್ತು.

Comments are closed.