ರಾಷ್ಟ್ರೀಯ

ರಾಂಗ್ ಪಾರ್ಕಿಂಗ್’ನಲ್ಲಿ ನಿಲ್ಲಿಸಿದ ವಾಹನಗಳ ಫೋಟೋ ಕ್ಲಿಕ್ಕಿಸಿ, 100 ರು.ಬಹುಮಾನ ಪಡೆಯಿರಿ !

Pinterest LinkedIn Tumblr

ನವದೆಹಲಿ: ನಿಲ್ದಾಣವಲ್ಲದ ಜಾಗದಲ್ಲಿ ಕಾರು ಪಾರ್ಕಿಂಗ್ ಮಾಡಿದ್ದರೇ, ಅಂಥಹ ಕಾರಿನ ಫೋಟೋ ತೆಗೆದು ಕಳುಹಿಸಿದರೇ , ಅದಕ್ಕೆ ಬದಲಾಗಿ 100 ರುಪಾಯಿ ಬಹುಮಾನ ಕೊಡುವ ಹೊಸ ಯೋಜನೆಯನ್ನು ಜಾರಿಗೆ ತರಲು ಕೇಂದ್ರ ಸಾರಿಗೆ ಇಲಾಖೆ ಚಿಂತಿಸಿದೆ.

ಪಾರ್ಕಿಂಗ್ ಇಲ್ಲದ ಜಾಗದಲ್ಲಿ ಕಾರು ನಿಲ್ಲಿಸುವವರ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿದೆ. ಕೇಂದ್ರ ಸಾರಿಗೆ ಸಚಿವ ಮತ್ತು ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಇಬ್ಬರು ಸಮಾಲೋಚಿಸಿ ಈ ಯೋಜನೆ ಜಾರಿಗೆ ತರಲು ನಿರ್ಧರಿಸಿದ್ದಾರೆ. ಫೋಟೋ ಕಳಹಿಸುವವರಿಗೆ ಸಂಚಾರಿ ಪೊಲೀಸರು 100 ರು ಚಲನ್ ನೀಡಿ ಹಣ ಕೊಡುತ್ತಾರೆ ಎಂದು ಹೇಳಿದ್ದಾರೆ.

ಬಹುತೇಕ ನಗರಗಳಲ್ಲಿ ರಸ್ತೆಗಳೇ ಪಾರ್ಕಿಂಗ್ ಸ್ಥಳವಾಗಿ ಮಾರ್ಪಟ್ಟಿವೆ. ಇದರಿಂದಾಗಿ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗುತ್ತದೆ, ಹೀಗಾಗಿ ಇದನ್ನು ತಪ್ಪಿಸಲು ಈ ಹೊಸ ಯೋಜನೆ ರೂಪಿಸುತ್ತಿರುವುದಾಗಿ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ಕಾರು ನಿಲ್ಲಿಸಲು ಜಾಗ ಇದ್ದರೆ ಮಾತ್ರ ಕಾರು ಕೊಳ್ಳಲ ಅನುಮತಿ ನೀಡುವ ಸರ್ಕಾರ ಯೋಜನೆ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

Comments are closed.