ರಾಷ್ಟ್ರೀಯ

ಕರುವಿನ ಮಾಲೀಕತ್ವಕ್ಕಾಗಿ ಹಸುವಿನ ಡಿಎನ್ಎ ಪರೀಕ್ಷೆಗೆ ಮುಂದಾದ ಪೊಲೀಸರು!

Pinterest LinkedIn Tumblr

cow
ಮುತ್ತುಪೇಟೈ(ತಮಿಳುನಾಡು): ಸಾಮಾನ್ಯವಾಗಿ ಆಸ್ಪತ್ರೆಗಳಲ್ಲಿ ಹುಟ್ಟಿದ ಮಕ್ಕಳು ಅದಲು ಬದಲಾದರೆ ಪೋಷಕರ ಡಿಎನ್ಎ ಪರೀಕ್ಷೆ ನಡೆಸುವುದು ಸಾಮಾನ್ಯ. ಆದರೆ ತಮಿಳುನಾಡು ಪೊಲೀಸರು ಇದೀಗ ಹಸುವಿಗೆ ಡಿಎನ್ಎ ಪರೀಕ್ಷೆ ನಡೆಸಲು ಮುಂದಾಗಿದ್ದಾರೆ.
ತಿರುವರುರ್ ಜಿಲ್ಲೆಯಲ್ಲಿ ನೆಲೆಸಿರುವ ರಾಜರತಿಮಮ್ ಮತ್ತು ಮತಿಯಳಗನ್ ಸಂಬಂಧಿಗಳಾಗಿದ್ದಾರೆ. ಇದೀಗ ಇವರಿಬ್ಬರು ಮೂರು ವರ್ಷದ ಕರು ತಮ್ಮದೆಂದು ತಗಾದೆ ತೆಗೆದಿದ್ದು ಸಮಸ್ಯೆ ಪರಿಹಾರಕ್ಕಾಗಿ ಹಸುವಿನ ಡಿಎನ್ಎ ಪರೀಕ್ಷೆ ನಡೆಸಲು ಮುಂದಾಗಿದ್ದಾರೆ.
ರಾಜರತಿಮಮ್ ಅವರು ತಮ್ಮ ಮನೆಯಲ್ಲಿ ಸಾಕಿರುವ ಹಸು ಕರುವಿಗೆ ಜನ್ಮ ನೀಡಿದ್ದು ನಾಪತ್ತೆಯಾಗಿತ್ತು. ಇದೀಗ ಆ ಕರು ತಮ್ಮ ಸಂಬಂಧಿ ಮತಿಯಳಗನ್ ಅವರ ಮನೆಯಲ್ಲಿ ಪತ್ತೆಯಾಗಿದ್ದು ಅದು ನಮ್ಮದೆ ಹಸುವಿನ ಕರು ಎಂದು ಪೊಲೀಸರಿಗೆ ದೂರು ನೀಡಿದ್ದರು.
ಇದನ್ನು ತಿರಸ್ಕರಿಸಿರುವ ಮತಿಯಳಗನ್ ಅವರು ಇದು ನಮ್ಮದೆ ಕರು ಎಂದು ಪಟ್ಟು ಹಿಡಿದಿದ್ದು ಈ ವಿಚಾರ ಈಗ ಬಿಡಿಸಲಾರದ ಕಗ್ಗಂಟಾಗಿದೆ. ಕರು ತಮ್ಮದೆಂದು ಇಬ್ಬರು ಪಟ್ಟು ಹಿಡಿದಿರುವುದರಿಂದ ಇಬ್ಬರನ್ನು ಮನವೊಳಿಸಿರುವ ಪೊಲೀಸರು ಸಮಸ್ಯೆ ಪರಿಹಾರಕ್ಕೆ ವೈಜ್ಞಾನಿಕ ಕ್ರಮಕ್ಕೆ ಮುಂದಾಗಿದ್ದಾರೆ.

Comments are closed.