ರಾಷ್ಟ್ರೀಯ

ತಮಿಳುನಾಡಿಗೆ ಫೆ.7ರ ವರೆಗೂ ದಿನವೂ 2,000 ಕ್ಯೂಸೆಕ್‌ ನೀರು ಬಿಡಲು ಸುಪ್ರೀಂ ಸೂಚನೆ

Pinterest LinkedIn Tumblr

kaveri
ನವದೆಹಲಿ: ಕರ್ನಾಟಕದಿಂದ ಫೆಬ್ರವರಿ 7ರ ವರೆಗೂ ತಮಿಳುನಾಡಿಗೆ ನಿತ್ಯ 2 ಸಾವಿರ ಕ್ಯೂಸೆಕ್‌ ಕಾವೇರಿ ನೀರು ಹರಿಸುವುದನ್ನು ಮುಂದುವರಿಸುವಂತೆ ಸುಪ್ರೀಂ ಕೋರ್ಟ್‌ ಮಂಗಳವಾರ ಸೂಚಿಸಿತು.

ಕಾವೇರಿ ನದಿ ನೀರು ಹಂಚಿಕೆ ಸಂಬಂಧ ಕರ್ನಾಟಕ, ತಮಿಳುನಾಡು ಹಾಗೂ ಕೇರಳ ರಾಜ್ಯಗಳು ಕಾವೇರಿ ನ್ಯಾಯಾಧಿಕರಣದ ಐ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾ‌ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್‌ 2016ರ ಅಕ್ಟೋಬರ್‌ 18ರ ತೀರ್ಪನ್ನು ಪುನರುಚ್ಚರಿಸಿತು.

ಫೆಬ್ರವರಿ 7ರಂದು ಅಂತಿಮ ವಿಚಾರಣೆ ನಡೆಸಲಿದ್ದು, ಆವರೆಗೂ ತಮಿಳುನಾಡಿಗೆ ನಿತ್ಯ 2 ಸಾವಿರ ಕ್ಯೂಸೆಕ್‌ ಕಾವೇರಿ ನೀರು ಹರಿಸುವುದನ್ನು ಮುಂದುವರಿಸುವಂತೆ ನ್ಯಾ.ದೀಪಕ್‌ ಮಿಶ್ರಾ, ಅಮಿತವಾ ರಾಯ್‌ ಮತ್ತು ಎ.ಎಂ.ಖಾನ್‌ವಿಲ್ಕರ್‌ ಅವರನ್ನು ಒಳಗೊಂಡ ನ್ಯಾಯಪೀಠ ಆದೇಶಿಸಿತು.

ಕಾವೇರಿ ನ್ಯಾಯಾಧಿಕರಣದ ಐ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್‌ ಡಿಸೆಂಬರ್‌ 9ರಂದು ಸಮ್ಮತಿಸಿತ್ತು.

Comments are closed.