ರಾಷ್ಟ್ರೀಯ

ಮೋದಿಯ ಹೊಸ ವರ್ಷದ ಭಾಷಣದಲ್ಲಿ ಯಾವಾಗಲೂ ಬಳಸುತ್ತಿದ್ದ ಒಂದು ಪದ ಇರಲಿಲ್ಲ ಗೊತ್ತಾ?

Pinterest LinkedIn Tumblr

modhii
ನವದೆಹಲಿ: ಡಿಸೆಂಬರ್ 31ರಂದು ಜನ ಹೊಸ ವರ್ಷಕ್ಕೆ ಕಾಯುವುದರ ಜೊತೆಗೆ ನೋಟ್‍ಬ್ಯಾನ್ ಬಗ್ಗೆ ನರೇಂದ್ರ ಮೋದಿ ಭಾಷಣದಲ್ಲಿ ಏನು ಹೇಳ್ತಾರೋ, ಮತ್ತೇನು ಶಾಕ್ ಕೊಡ್ತಾರೋ ಅಂತ ಕಾಯ್ತಿದ್ರು. ಆದ್ರೆ ಅವರ ಭಾಷಣ ಕೇಳಿದ ನಂತರ ಕೆಲವರಿಗೆ ತುಂಬಾ ಬೇಜಾರಾಗಿದ್ಯಂತೆ. ಅದ್ಯಾಕಪ್ಪಾ ಅಂದ್ರಾ? ಮೋದಿ ಅವರ ಭಾಷಣದಲ್ಲಿ ಯಾವಾಗಲೂ ಬಳಸುತ್ತಿದ್ದ ಒಂದು ಪದ ನಿನ್ನೆಯ ಭಾಷಣದಲ್ಲಿ ಇರಲಿಲ್ಲ ಅನ್ನೋದೇ ಇದಕ್ಕೆ ಕಾರಣ.

ಹೌದು. ಮೋದಿ ಅವರು ತಮ್ಮ ಬಹುತೇಕ ಭಾಷಣಗಳಲ್ಲಿ ದೇಶದ ಜನರನ್ನ ಕುರಿತು ಭಾಯಿಯೋ ಔರ್ ಬೆಹೆನೋ…, ಪ್ಯಾರೇ ದೇಶ್‍ವಾಸಿಯೋ…, ಮಿತ್ರೋ…. ಅನ್ನೋ ಪದಗಳನ್ನ ಬಳಸ್ತಿದ್ರು. ಇವುಗಳಲ್ಲಿ ‘ಮಿತ್ರೋ’ ಪದ ಮಾತ್ರ ಸಖತ್ ಫೇಮಸ್. ಮೋದಿ ಅವರು ಈ ಪದವನ್ನ ಹೆಚ್ಚಾಗಿ ಬಳಸೋದ್ರಿಂದ ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‍ಗಳು ಹಾಗೂ ಮೀಮ್ಸ್ ಗಳು ಹರಿದಾಡಿದ್ವು. ಹಾಗೇ ಶನಿವಾರದಂದು ಕೂಡ ಮಿತ್ರೋ ಪದ ಟ್ರೆಂಡಿಂಗ್ ಆಗಿತ್ತು. ಕಾರಣ ಮೋದಿ ಅವರು ಭಾಷಣದಲ್ಲಿ ಈ ಪದ ಬಳಸಲೇ ಇಲ್ಲವಲ್ಲ ಅನ್ನೋದು. ಮಿತ್ರೋ ಪದದ ಬದಲಾಗಿ ಮೋದಿ ‘ದೋಸ್ತೋ’ ಅನ್ನೋ ಪದ ಬಳಸಿದ್ರು. ಮಿತ್ರೋ ಹಾಗೂ ದೋಸ್ತೋ ಎರಡೂ ಪದಕ್ಕೂ ಸ್ನೇಹಿತರೇ ಎಂಬ ಅರ್ಥವೇ ಬರುತ್ತದೆ. ಆದ್ರೂ ಜನರಿಗೆ ಅದ್ಯಾಕೋ ಮಿತ್ರೋ ಪದ ಬಳಸಲಿಲ್ವಲ್ಲಾ ಅನ್ನೋ ಬೇಜಾರಂತೆ.

ಮೋದಿ ಭಾಷಣ ಮುಗಿದ ನಂತರ ಈ ಬಗ್ಗೆ ಟ್ವಿಟ್ಟರ್‍ನಲ್ಲಿ ಕೆಲವರು ಹೇಳಿಕೊಂಡಿದ್ದು, ಮೋದಿ ಅವರು ಮಿತ್ರೋ ಪದದ ಜಾಗಕ್ಕೆ ದೋಸ್ತೋ ಪದವನ್ನ ತಂದಿದ್ದಾರೆ ಅಂತ ಹೇಳ್ಬೇಡಿ. ಮೊದಲು ನಮ್ಮಿಂದ ನೋಟ್‍ಗಳನ್ನ ತೆಗೆದುಕೊಂಡ್ರು. ಈಗ ನಮ್ಮ ಪ್ರೀತಿಯ ಮಿತ್ರೋ ಪದವನ್ನ ತೆಗೆದುಕೊಳ್ತಿದ್ದಾರೆ ಅಂತ ಹೇಳಿದ್ದಾರೆ.

ಬಹುಶಃ ಆಮಿರ್‍ಖಾನ್ ಪಾತ್ರದಂತವರು ಯಾರೋ ಮೋದಿ ಭಾಷಣದ ಸಾರಾಂಶವನ್ನ ಬದಲಾಯಿಸಿರಬಹುದು. ಇದಕ್ಕೆ ಸಾಕ್ಷಿ ಮಿತ್ರೋ ಬದಲಿಗೆ ದೋಸ್ತೋ ಪದ ಇದೆ. ನನಗೆ ಮಿತ್ರೋ ಬೇಕು ಅಂತ ಮತ್ತೊಬ್ಬ ಟ್ವಿಟ್ಟರ್ ಬಳಕೆದಾರರು ಫನ್ನಿಯಾಗಿ ಟ್ವೀಟ್ ಮಾಡಿದ್ದಾರೆ.

Follow
Samosaji @ek_samosa_dena
Modi must be the first man to Friendzone an entire country. #Mitron
6:19 PM – 29 Dec 2016
604 604 Retweets 633 633 likes
Follow
Amar Thakur @amarthakur
Don’t tell me, he is replacing #Mitron with Doston! First he took away our notes now he is taking away our beloved Mitron! #ModiSpeech
8:36 PM – 31 Dec 2016
5 5 Retweets 12 12 likes
Follow
Desh Bhakth @akshayasobhana
#ModiSpeech I think some Aamir Khan character has changed the content …1st proof …mitron changed to doston …I want mitron !!?
8:35 PM – 31 Dec 2016
1 1 Retweet 9 9 likes
Follow
Sahil Shah ✔ @SahilBulla
Modiji’s scriptwriter just used find and replace to change all instances of Mitron to Deshvasiyon.
7:39 PM – 31 Dec 2016
60 60 Retweets 129 129 likes
Follow
कोमल 🙂 @Komal_Indian
He probably hasn’t used mitron even once !
Agenda Kya hai bhai !#ModiSpeech
7:50 PM – 31 Dec 2016
11 11 Retweets 25 25 likes
ನವೆಂಬರ್ 8 ರಂದು ನೋಟ್‍ಬ್ಯಾನ್ ನಿರ್ಧಾರ ಘೋಷಿಸಿದ ನಂತರ ಪ್ರಧಾನಿ ನಿನ್ನೆಯ ಎರಡನೇ ಅಧಿಕೃತ ಭಾಷಣದಲ್ಲಿ 45 ನಿಮಿಷ ಮಾತನಾಡಿದ್ರು. ಗರ್ಭಿಣಿಯರಿಗೆ, ಹಿರಿಯ ನಾಗರೀಕರಿಗೆ ಹಾಗೂ ರೈತರಿಗೆ ಹಲವು ಯೋಜನೆಗಳನ್ನು ಮೋದಿ ಘೋಷಿಸಿದ್ರು.

Comments are closed.