ದಾವಣಗೆರೆ(ಜ. 01): ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಏಸಿ ಡೆಕ್ ತುಂಬಿದ್ದ ಲಾರಿಯೊಂದು ಪಲ್ಟಿಯಾಗಿದೆ. ಲಾರಿ ನಿರ್ವಾಹಕನಿಗೆ ತೀವ್ರ ಪೆಟ್ಟು ಬಿದ್ದಿದ್ದರೂ ಸ್ಥಳೀಯ ಜನರು ಲಾರಿಯೊಳಗಿದ್ದ ಏರ್’ಕಂಡೀಷನರ್ ಬಾಕ್ಸ್’ಗಳನ್ನು ಹೊತ್ತೊಯ್ಯಲು ಮುಗಿಬಿದ್ದಿದ್ದರು.
ಮುಂಬೈನಿಂದ ಕೇರಳಕ್ಕೆ ಸಂಚರಿಸುತ್ತಿದ್ದ ಈ ಲಾರಿ ಹೇಗೆ ಅಪಘಾತಕ್ಕೀಡಾಯಿತು ಎಂಬ ಮಾಹಿತಿ ತಿಳಿದುಬಂದಿಲ್ಲ. ದಾವಣಗೆರೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.