ಲಖನೌ: ಸಮಾಜವಾದಿ ಪಕ್ಷದ ಪ್ರಧಾನ ಕಾರ್ಯದರ್ಶಿ ರಾಮ್‌ಗೋಪಾಲ್ ಯಾದವ್ ಅವರನ್ನು ಮತ್ತೆ ಪಕ್ಷದಿಂದ ಉಚ್ಚಾಟಿಸಿರುವ ಮುಲಾಯಂ ಸಿಂಗ್ ಯಾದವ್, ಜನವರಿ 5ರಂದು ಪಕ್ಷದ ಕಾರ್ಯಕಾರಿಣಿ ನಡೆಸುವುದಾಗಿ ಪ್ರಕಟಿಸಿದರು.
ರಾಮ್‌ಗೋಪಾಲ್ ನೇತೃತ್ವದಲ್ಲಿ ಭಾನುವಾರ ನಡೆದಿರುವ ಸಮಾಜವಾದಿ ಪಕ್ಷದ ರಾಷ್ಟ್ರೀಯ ಸಭೆ ಅಸಾಂವಿಧಾನಿಕ ಎಂದಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್, ರಾಮ್‌ಗೋಪಾಲ್ ಅವರನ್ನು ಪಕ್ಷದಿಂದ 6 ವರ್ಷಗಳ ಅವಧಿಗೆ ಉಚ್ಚಾಟಿಸಿದ್ದಾರೆ.
ಕಾರ್ಯಕಾರಿಣಿ ಸಭೆಯಲ್ಲಿ ಅಖಿಲೇಶ್ ಯಾದವ್ ಅವರನ್ನು ಪಕ್ಷದ ರಾಷ್ಟ್ರಾಧ್ಯಕ್ಷರಾಗಿ ಆಯ್ಕೆ ಮಾಡಿ, ಮುಲಾಯಂ ಸಿಂಗ್ ಯಾದವ್ ಮಾರ್ಗದರ್ಶಕರಾಗಿರುತ್ತಾರೆ ಎಂದು ರಾಮ್‌ಗೋಪಾಲ್ ಘೋಷಿಸಿದ್ದರು.