ರಾಷ್ಟ್ರೀಯ

ವಿದೇಶದಲ್ಲಿದ್ದ ಭಾರತೀಯರಿಗೆ ಆರ್‍ಬಿಐನಲ್ಲಿ ಹಳೇನೋಟ್ ಜಮೆಗೆ ಜೂನ್ 30ರವರೆಗೆ ಅವಕಾಶ

Pinterest LinkedIn Tumblr

note
ನವದೆಹಲಿ: ಹಳೆಯ ನೋಟುಗಳನ್ನ ಬ್ಯಾಂಕ್‍ನಲ್ಲಿ ಜಮೆ ಮಾಡಲು ನೀಡಲಾಗಿದ್ದ ಅವಧಿ ಡಿಸೆಂಬರ್ 30ಕ್ಕೆ ಅಂತ್ಯವಾಗಿದೆ. ಆರ್‍ಬಿಐ ಕಾಯ್ದೆಯ ತಿದ್ದುಪಡಿಗೆ ಅನುವು ಮಾಡಿಕೊಟ್ಟಿರುವ ಸುಗ್ರೀವಾಜ್ಞೆ ಡಿಸೆಂಬರ್ 31 ಅಂದ್ರೆ ಇಂದಿನಿಂದ ಜಾರಿಗೆ ಬರಲಿದೆ. ಅಲ್ಲದೆ ವಿದೇಶದಲ್ಲಿದ್ದ ಭಾರತೀಯರು ಆರ್‍ಬಿಐನಲ್ಲಿ ಹಳೇನೋಟ್‍ಗಳನ್ನು ಜಮೆ ಮಾಡಲು ಜೂನ್ 30ರವರೆಗೆ ಅವಕಾಶ ನೀಡಲಾಗಿದೆ.

ಇಂದಿನಿಂದ ಹಳೆಯ ಐನೂರು, ಸಾವಿರ ರೂಪಾಯಿ ನೋಟನ್ನು ಸ್ವೀಕರಿಸುವುದಾಗಲೀ, ಇಟ್ಟುಕೊಳ್ಳುವುದಾಗಲೀ ಅಥವಾ ವರ್ಗಾವಣೆ ಮಾಡುವುದಾಗಲೀ ಅಪರಾಧ. ಹಳೆ ನೋಟಲ್ಲಿ ವ್ಯವಹಾರ ಮಾಡುತ್ತಾ ಸಿಕ್ಕಿಬಿದ್ದರೆ ಕನಿಷ್ಠ 10 ಸಾವಿರ ರೂಪಾಯಿ ಅಥವಾ ನೋಟುಗಳ ಒಟ್ಟು ಮೌಲ್ಯದ ಐದು ಪಟ್ಟು ದಂಡ ವಿಧಿಸಲಾಗುತ್ತದೆ. ಅಲ್ಲದೆ ಒಬ್ಬ ವ್ಯಕ್ತಿ 500 ಹಾಗೂ 1000 ರೂ. ಮುಖಬೆಲೆಯ 10ಕ್ಕಿಂತ ಹೆಚ್ಚು ನೋಟ್‍ಗಳನ್ನು ಇಟ್ಟುಕೊಳ್ಳುವಂತಿಲ್ಲ.

ಇಷ್ಟು ದಿನ ಹಳೇ ನೋಟ್‍ಗಳನ್ನು ಬ್ಯಾಂಕ್‍ಗಳಲ್ಲಿ ಜಮೆ ಮಾಡಲು ಸಾಧ್ಯವಾಗದವರು 2017ರ ಮಾರ್ಚ್ 31 ರವರೆಗೆ ಆರ್‍ಬಿಐ ಶಾಖೆಗಳಲ್ಲಿ ಸೂಕ್ತ ವಿವರಣೆ ನೀಡಿ ಜಮೆ ಮಾಡಬಹುದಾಗಿದೆ.

ನವೆಂಬರ್ 9ರಿಂದ ಡಿಸೆಂಬರ್ 30ರವರೆಗೆ ವಿದೇಶದಲ್ಲಿದ್ದ ಭಾರತೀಯರು 2017ರ ಜೂನ್ 30ರವರೆಗೆ ಹಳೆಯ ನೋಟುಗಳನ್ನು ಆರ್‍ಬಿಐನಲ್ಲಿ ಜಮೆ ಮಾಡಲು ಅವಕಾಶ ನೀಡಲಾಗಿದೆ. ಈ ವ್ಯವಸ್ಥೆ 2015ರ ವಿದೇಶಿ ವಿನಿಮಯ ನಿರ್ವಹಣಾ (ಕರೆನ್ಸಿಯ ಆಮದು ಮತ್ತು ರಫ್ತು)ನಿಯಮ ಕ್ಕೆ ಒಳಪಟ್ಟಿರುವುದರಿಂದ ಒಬ್ಬ ವ್ಯಕ್ತಿ 25 ಸಾವಿರ ರೂ. ಹಣವನ್ನು ಮಾತ್ರ ಭಾರತಕ್ಕೆ ತರಬಹುದಾಗಿದೆ. ಅಲ್ಲದೆ ಹಣ ತರುವವರು ವಿಮಾನ ನಿಲ್ದಾಣಗಳಲ್ಲಿ ಕಸ್ಟಮ್ಸ್ ಅಧಿಕಾರಿಗಳಿಗೆ ಸೂಕ್ತ ವಿವರಣೆ ನೀಡಬೇಕಾಗುತ್ತದೆ.

Comments are closed.