ರಾಷ್ಟ್ರೀಯ

ಬಿಹಾರ ಸೆಂಟ್ರಲ್‌ ಜೈಲಿನಿಂದ ಕೈದಿಗಳು ಪರಾರಿ

Pinterest LinkedIn Tumblr

jail
ಬಿಹಾರ: ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಕೈದಿಗಳು ಸೇರಿದಂತೆ ಐದು ಮಂದಿ ಅಪರಾಧಿಗಳು ಬಕ್ಸರ್‌ ಸೆಂಟ್ರಲ್‌ ಜೈಲ್‌ನಿಂದ ತಪ್ಪಿಸಿಕೊಂಡಿದ್ದಾರೆ.

ಶುಕ್ರವಾರ ರಾತ್ರಿ 12ರಿಂದ 3 ಗಂಟೆ ನಡುವೆ ಕೈದಿಗಳು ಜೈಲಿನ ಗೋಡೆ ಹಾರಿ ತಪ್ಪಿಸಿಕೊಂಡಿದ್ದಾರೆ. ಗೋಡೆಯ ಸಮೀಪ ಕಬ್ಬಿಣದ ಸಲಾಕೆ, ಪೈಪ್‌ ಹಾಗೂ ಧೋತಿ ದೊರೆತಿರುವುದಾಗಿ ಜಿಲ್ಲಾ ಮ್ಯಾಜಿಸ್ಟ್ರೇಟ್‌ ರಮಣ್‌ ಕುಮಾರ್‌ ತಿಳಿಸಿದರು.

ಜೀವಾವಧಿ ಶಿಕ್ಷೆಗೆ ಒಳಗಾಗಿರುವ ಪ್ರಜಿತ್ ಸಿಂಗ್‌, ಗಿರ್ಧಾರಿ ರಾಯ್‌, ಸೋನು ಪಾಂಡೆ, ಉಪೇಂದ್ರ ಸಾಹ್ ಹಾಗೂ 10 ವರ್ಷಗಳ ಶಿಕ್ಷೆಗೆ ಗುರಿಯಾಗಿದ್ದ ಸೋನು ಸಿಂಗ್‌ ತಪ್ಪಿಸಿಕೊಂಡಿರುವ ಕೈದಿಗಳು.

ಮಧ್ಯರಾತ್ರಿ ಆವರಿಸಿಕೊಂಡಿದ್ದ ದಟ್ಟ ಮಂಜು ಭದ್ರತಾ ಸಿಬ್ಬಂದಿಗಳಿಂದ ಕೈದಿಗಳು ತಪ್ಪಿಸಿಕೊಳ್ಳಲು ಸಹಕಾರಿಯಾಗಿರಬಹುದು ಎಂದು ಎಸ್‌ಪಿ ಉಪೇಂದ್ರ ಶರ್ಮಾ ಅಭಿಪ್ರಾಯಪಟ್ಟರು.

Comments are closed.