ರಾಷ್ಟ್ರೀಯ

ಭೀಮ್ ಆ್ಯಪ್ ಬಳಸೋದು ಹೇಗೆ?

Pinterest LinkedIn Tumblr

bhim
ನವದೆಹಲಿ: ಪ್ರಧಾನಿ ಮೋದಿ ಶುಕ್ರವಾರದಂದು ಡಿಜಿ ಧನ್ ಮೇಳದಲ್ಲಿ ಭೀಮ್ ಆ್ಯಪ್ ಬಿಡುಗಡೆ ಮಾಡಿದ್ದಾರೆ. ಇದು ಯುಪಿಐ ಆಧರಿತ ಡಿಜಿಟಲ್ ಪೇಮೆಂಟ್ ಆ್ಯಪ್ ಆಗಿದ್ದು, ಗ್ರಾಹಕರು ಈ ಆ್ಯಪ್ ಅಳವಡಿಸಿಕೊಂಡು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಸುಲಭವಾಗಿ ಹಣ ಸಂದಾಯ ಹಾಗೂ ಸ್ವೀಕಾರ ಮಾಡಬಹುದಾಗಿದೆ.

ಭೀಮ್ ಆ್ಯಪ್ ಬಳಸೋದು ಹೇಗೆ?:
* ನಿಮ್ಮ ಸ್ಮಾರ್ಟ್‍ಫೋನಿನಲ್ಲಿ ಗೂಗಲ್ ಪ್ಲೇಸ್ಟೋರ್/ ಆಪಲ್ ಐ ಟ್ಯೂನ್ ಸ್ಟೋರ್ ಹೋಗಿ ಭೀಮ್ ಆ್ಯಪ್ ಎಂದು ಸರ್ಚ್ ಮಾಡಿ ಇನ್ಸ್ಟಾಲ್ ಮಾಡಿಕೊಳ್ಳಿ (ಅದರ ಲಿಂಕ್ ಇಲ್ಲಿದೆ https://play.google.com/store/apps/details?id=in.org.npci.upiapp )
* ಆ್ಯಪ್ ತೆರೆದ ನಂತರ ನೀವು ಬಯಸುವ ಭಾಷೆ ಆಯ್ಕೆ ಮಾಡಿಕೊಳ್ಳಿ – ಹಿಂದಿ/ಇಂಗ್ಲಿಷ್
* ಇದಾದ ನಂತರ ಒಂದು ವೇಳೆ ನೀವು ನಿಮ್ಮ ಫೋನ್‍ನಲ್ಲಿ ಎರಡು ಸಿಮ್ ಬಳಸುತ್ತಿದ್ದರೆ ಒಂದು ಸಿಮ್ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಈ ಹಂತದಲ್ಲಿ ಬ್ಯಾಂಕ್ ಖಾತೆಯೊಂದಿಗೆ ಸಂಪರ್ಕಿಸಲಾಗಿರುವ ಮೊಬೈಲ್ ನಂಬರ್/ ಸಿಮ್ ಆಯ್ಕೆ ಮಾಡಿಕೊಳ್ಳಲು ಗ್ರಾಹಕರಿಗೆ ಸಲಹೆ ನೀಡಲಾಗಿದೆ.
* ನಂತರ ನಿಮ್ಮ ಸಿಮ್‍ನಿಂದ ಆ್ಯಪ್ ಒಂದು ಒಟಿಪಿ ಸಂದೇಶವನ್ನು ಕಳಿಸುತ್ತದೆ (ಇದಕ್ಕೆ 1 ರೂ. ಕಡಿತವಾಗುತ್ತದೆ)
* ನಿಮ್ಮ ಮೊಬೈಲ್ ನಂಬರ್ ವೆರಿಫೈ ಆದ ನಂತರ 4 ಸಂಖ್ಯೆಯ ಪಿನ್/ಪಾಸ್‍ಕೋಡ್ ಆಯ್ಕೆ ಮಾಡಬೇಕಾಗುತ್ತದೆ.
* ಪಾಸ್‍ಕೋಡ್ ಹಾಕಿದ ನಂತರ ಪಟ್ಟಿಯಲ್ಲಿರುವ 31 ಬ್ಯಾಂಕ್‍ಗಳಲ್ಲಿ ನಿಮ್ಮ ಬ್ಯಾಂಕನ್ನು ಆಯ್ಕೆ ಮಾಡಿಕೊಳ್ಳಬೇಕು.
* ನಂತರ ನಿಮ್ಮ ಅಕೌಂಟ್ ನಂಬರ್ ಹಾಕಬೇಕು.
* ನಂತರ ಸೆಂಡ್, ರಿಕ್ವೆಸ್ಟ್, ಸ್ಕ್ಯಾನ್, ರೀಪೇ ಎಂಬ ಆಯ್ಕೆಗಳಿರುವ ಸ್ಕ್ರೀನ್ ತೋರಿಸುತ್ತದೆ.
* ಈಗ ನೀವು ಆ್ಯಪ್‍ಗೆ ಯಶಸ್ವಿಯಾಗಿ ಲಾಗಿನ್ ಆಗಿದ್ದು ಆ್ಯಪ್ ಬಳಸಲು ಸಿದ್ದವಾಗಿದೆ ಎಂದರ್ಥ.

Comments are closed.