ರಾಷ್ಟ್ರೀಯ

ಜನ ನಿಮ್ಮ ಸರ್ಕಾರದ ಭಿಕ್ಷುಕರಲ್ಲ: ಮಮತಾ ಬ್ಯಾನರ್ಜಿ

Pinterest LinkedIn Tumblr

mamatha-24
ಕೋಲ್ಕತ್ತಾ: ನಗದು ಹಿಂಪಡೆತ ಮಿತಿಯ ಕೇಂದ್ರ ಸರ್ಕಾರದ ನಿರ್ಬಂಧದ ಮೇಲೆ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.
“ಮೋದಿ ಬಾಬು, ಸಾರ್ವಜನಿಕರು ನಿಮ್ಮ ಸರ್ಕಾರದ ಭಿಕ್ಷುಕರಲ್ಲ. ನಗದು ಹಿಂಪಡೆತದ ಮೇಲೆ ನಿರ್ಬಂಧವಿರುವುದೇಕೆ? ೫೦ ದಿನಗಳು ಮುಗಿದಿವೆ. ಜನರು ಕಷ್ಟ ಪಟ್ಟು ದುಡಿದ ಹಣವನ್ನು ಹಿಂಪಡೆದುಕೊಳ್ಳುವ ಹಕ್ಕನ್ನು ನಾಗರಿಕರಿಂದ ಕಿತ್ತುಕೊಂಡಿರುವುದು ಏಕೆ?” ಎಂದು ಅವರು ಟ್ವೀಟ್ ಮಾಡಿದ್ದಾರೆ.
ನವೆಂಬರ್ ೮ ರಂದು ೫೦೦ ಮತ್ತು ೧೦೦೦ ರೂ ನೋಟುಗಳನ್ನು ಹಿಂಪಡೆಯುವ ನಿರ್ಧಾರ ಘೋಷಿಸಿದ್ದ ಮೋದಿ, ಸಹಜ ಸ್ಥಿತಿಗೆ ಮರಳಿಸಲು ೫೦ ದಿನಗಳ ಸಮಯಾವಕಾಶ ಕೋರಿದ್ದರು.
“ಸರ್ಕಾರಗಳು ಅಧಿಕಾರಕ್ಕೆ ಬರಬಹುದು ಆದರೆ ಜನರ ಆರ್ಥಿಕ ಹಕ್ಕುಗಳನ್ನು ಕಸಿದುಕೊಳ್ಳುವ ಅಧಿಕಾರ ಅವರಿಗಿಲ್ಲ” ಎಂದು ಮಮತಾ ಹೇಳಿದ್ದಾರೆ.

Comments are closed.