ರಾಷ್ಟ್ರೀಯ

ಅರುಣಾಚಲ ಪ್ರದೇಶ: ಪಿಪಿಎಯ 33 ಶಾಸಕರು ಬಿಜೆಪಿ ಸೇರ್ಪಡೆ

Pinterest LinkedIn Tumblr

pema-kandu
ಇಟಾನಗರ: ಅರುಣಾಚಲ ಪ್ರದೇಶ ಪೀಪಲ್ಸ್‌ ಪಾರ್ಟಿ(ಪಿಪಿಎ)ಯ 33 ಶಾಸಕರು ಬಿಜೆಪಿ ಸೇರ್ಪಡೆಯಾಗಿದ್ದು, ಪಿಪಿಎಯಲ್ಲಿ ಕೇವಲ 10 ಶಾಸಕರು ಉಳಿದಿದ್ದಾರೆ.

ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪದಲ್ಲಿ ಅರುಣಾಚಲ ಪ್ರದೇಶ ಪೀಪಲ್ಸ್‌ ಪಾರ್ಟಿಯು (ಪಿಪಿಎ) ಮುಖ್ಯಮಂತ್ರಿ ಪೆಮಾ ಖಂಡು ಹಾಗೂ ಇತರ ಆರು ಶಾಸಕರನ್ನು ಗುರುವಾರ ರಾತ್ರಿ ಪಕ್ಷದಿಂದ ಅಮಾನತು ಮಾಡಲಾಗಿತ್ತು.

ಪಕ್ಷದ ತೀರ್ಮಾನದ ವಿರುದ್ಧ ಪೆಮಾ ಖಂಡು ಆಕ್ರೋಶ ವ್ಯಕ್ತಪಡಿಸಿದ್ದರು. ಈ ನಡುವೆ ರಾಜ್ಯ ಬಿಜೆಪಿ ಖಂಡು ಅವರಿಗೆ ಬೆಂಬಲ ಸೂಚಿಸಿತ್ತು.
ಶನಿವಾರ ನಡೆದಿರುವ ಬೆಳವಣಿಗೆಯಲ್ಲಿ ಪಿಪಿಎ 33 ಶಾಸಕರು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಒಟ್ಟು 60 ಸದಸ್ಯರನ್ನು ಹೊಂದಿರುವ ಅರುಣಾಚಲ ಪ್ರದೇಶದ ವಿಧಾನ ಸಭೆಯಲ್ಲಿ ಪಿಪಿಎ 10 ಶಾಸಕರನ್ನು ಮಾತ್ರ ಉಳಿಸಿಕೊಂಡಂತಾಗಿದೆ.

ಈ ಮೂಲಕ ಅರುಣಾಚಲ ಪ್ರದೇಶದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರಲಿದೆ.

ಸೆಪ್ಟೆಂಬರ್‌ನಲ್ಲಿ ಕಾಂಗ್ರೆಸ್‌ನಿಂದ ಪೆಮಾ ಖಂಡು ನೇತೃತ್ವದಲ್ಲಿ 40ಕ್ಕೂ ಹೆಚ್ಚು ಶಾಸಕರು ಪಕ್ಷಾಂತರಗೊಂಡು ಪಿಪಿಎ ಸೇರಿದ್ದರು

Comments are closed.