ರಾಷ್ಟ್ರೀಯ

ವಿಶ್ವಸಂಸ್ಥೆಯಲ್ಲಿ ಮಸೂದ್ ಅಝರ್ ನನ್ನು ಉಗ್ರನೆಂದು ಘೋಷಿಸುವುದಕ್ಕೆ ಚೀನಾದಿಂದ ವಿರೋಧ

Pinterest LinkedIn Tumblr

masood-azhar
ನವದೆಹಲಿ (ಡಿ.30): ಮಸೂದ್ ಅಝರ್’ನನ್ನು ಭಯೋತ್ಪಾದಕ ಎಂದು ಘೋಷಿಸುವ ವಿಶ್ವಸಂಸ್ಥೆ ಕ್ರಮಕ್ಕೆ ಚೀನಾ ಇನ್ನೊಮ್ಮೆ ತಡೆಯನ್ನೊಡ್ಡಿದೆ.
ವಿಶ್ವಸಂಸ್ಥೆ ಕ್ರಮಕ್ಕೆ ಚೀನಾ ತಡೆಯೊಡ್ಡಿರುವುದಕ್ಕೆ ಭಾರತವು ತೀವ್ರ ಕಳವಳ ವ್ಯಕ್ತಪಡಿಸಿದೆ.
ಚೀನಾ ಖುದ್ದು ಭಯೋತ್ಪಾದನೆ ಸಮಸ್ಯೆಯನ್ನು ಎದುರಿಸಿತ್ತಿರುವ ಹೊರತಾಗಿಯೂ, ಮಸೂದ್ ಅಝರ್’ನನ್ನು ಉಗ್ರನೆಂದು ಘೋಷಿಸುವ ಕ್ರಮಕ್ಕೆ ತಡೆಯೊಡ್ಡಿರುವುದು ಆಶ್ಚರ್ಯಕಾರಿಯಾಗಿದೆ ಎಂದು ವಿದೇಶಾಂಗ ಇಲಾಖೆ ವಕ್ತಾರ ವಿಕಾಸ್ ಸ್ವರೂಪ್ ಹೇಳಿದ್ದಾರೆ.
ಭಯೋತ್ಪಾದನೆ ವಿರುದ್ಧ ಹೋರಾಟದಲ್ಲಿ ಚೀನಾವು ದ್ವಂದ್ವ ನಿಲುವು ಅನುಸರಿಸುತ್ತಿದೆಯೆಂದು ಇದರಿಂದ ಸ್ಪಷ್ಟವಾಗಿದೆ ಎಂದು ಅವರು ಹೇಳಿದ್ದಾರೆ.

Comments are closed.