ರಾಷ್ಟ್ರೀಯ

ನಿಶ್ಚಿತಾರ್ಥವನ್ನು ನಿರಾಕರಿಸಿದ ವಿರಾಟ್‌ ಕೊಹ್ಲಿ

Pinterest LinkedIn Tumblr

virat-anushka
ಡೆಹ್ರಾಡೂನ್‌: ಭಾರತ ಟೆಸ್ಟ್‌ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಮತ್ತು ಬಾಲಿವುಡ್‌ ನಟಿ ಅನುಷ್ಕಾ ಶರ್ಮಾ ಅವರು ಜನವರಿ ಒಂದರಂದು ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎನ್ನುವ ಸುದ್ದಿಯನ್ನು ಕೊಹ್ಲಿ ನಿರಾಕರಿಸಿದ್ದಾರೆ.

ಮಾಧ್ಯಮಗಳಲ್ಲಿ ವರದಿಯಾದ ನಿಶ್ಚಿತಾರ್ಥ ಸುದ್ದಿಯನ್ನು ಕೊಹ್ಲಿ ಟ್ವೀಟ್‌ ಮಾಡುವ ಮೂಲಕ ನಿರಾಕರಿಸಿದ್ದಾರೆ. ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ನಿಶ್ಚಿತಾರ್ಥ ಸುದ್ದಿಯನ್ನು ಮುಚ್ಚಿಡುವುದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ. ಕೊಹ್ಲಿ ಮಾಡಿದ ಈ ಟ್ವೀಟ್‌ ಅನ್ನು ಅನುಷ್ಕಾ ಶರ್ಮಾ ರಿಟ್ವೀಟ್‌ ಮಾಡಿದ್ದಾರೆ.

ಇವರು ಗುರುವಾರ ಒಟ್ಟಾಗಿ ಹರಿದ್ವಾರದ ಆಶ್ರಮದ ಬಳಿ ಅರ್ಚಕರೊಬ್ಬರೊಂದಿಗೆ ತೆಗೆಸಿಕೊಂಡ ಫೋಟೊ ಲಭ್ಯವಾಗಿತ್ತು. ಇದರಿಂದ ಮಾಧ್ಯಮಗಳಲ್ಲಿ ವಿರಾಟ್‌ ಮತ್ತು ಅನುಷ್ಕಾ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು.

ಈ ತಾರಾ ಜೋಡಿಯ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಮತ್ತು ವೆಬ್‌ಸೈಟ್‌ಗಳಲ್ಲಿ ಸಾಕಷ್ಟು ಸುದ್ದಿಗಳು ಪ್ರಕಟವಾಗುತ್ತಿವೆ.

Comments are closed.