ರಾಷ್ಟ್ರೀಯ

ಕೋದಂಡ ರಾಮನಿಗೆ ಭಿಕ್ಷುಕನಿಂದ ಬೆಳ್ಳಿ ಕಿರೀಟ

Pinterest LinkedIn Tumblr

rama-yadireddy
ವಿಜಯವಾಡ: ಶ್ರೀಮಂತರು ದೇವರಿಗೆ ಕೋಟಿ ಬೆಲೆಯ ಚಿನ್ನಾಭರಣ ನೀಡುವುದು ಸಾಮಾನ್ಯ ಆದರೆ ಆಂಧ್ರಪ್ರದೇಶದ ರಾಜಧಾನಿ ವಿಜಯವಾಡದಲ್ಲಿ ಭಿಕ್ಷುಕನೊಬ್ಬ ಶ್ರೀರಾಮನಿಗೆ ಬೆಳ್ಳಿ ಕಿರೀಟವನ್ನು ಅರ್ಪಿಸಿ ಸಾರ್ಥಕತೆ ಭಾವ ಮೆರೆದಿದ್ದಾನೆ.
ಶ್ರೀರಾಮನಿಗೆ ಬೆಳ್ಳಿ ಕಿರೀಟ ಅರ್ಪಿಸಿದ ಭಿಕ್ಷುಕ ತೆಲಂಗಾಣದ ನಲ್ಗೊಂಡ ಜಿಲ್ಲೆಯ 75 ವರ್ಷದ ಯಾದಿರೆಡ್ಡಿ ಎಂದು ತಿಳಿದುಬಂದಿದೆ. ಯುವಕನಾಗಿದ್ದಾಗ ವಿಜಯವಾಡಗೆ ಬಂದ ಯಾದಿರೆಡ್ಡಿ ಹಲವು ಕೆಲಸಗಳನ್ನು ಮಾಡಿ ಜೀವನ ನಡೆಸಿದ್ದರು. ಅದರಲ್ಲಿ 45 ವರ್ಷಗಳ ಕಾಲ ರಿಕ್ಷಾ ಓಡಿಸಿ ಜೀವನ ನಡೆಸಿದ್ದರು. ಆದರೆ ದಿನ ಕಳೆದಂತೆ ವಯಸ್ಸು ಕಳೆದ ಯಾದಿರೆಡ್ಡಿ ನಗರದ ಪ್ರಮುಖ ರಸ್ತೆಗಳಲ್ಲಿ ಭಿಕ್ಷೆ ಬೇಡಲು ನಿಂತರು. ಸಂಸಾರದ ಜಂಜಾಟವಿಲ್ಲದ ಯಾದಿರೆಡ್ಡಿ ಜೀವನಕ್ಕಿಂತ ಹೆಚ್ಚಿಗೆ ಬಂದ ಹಣವನ್ನು ದೈವಿಕ ಕಾರ್ಯಗಳಿಗೆ ವಿನಿಯೋಗಿಸುತ್ತಿದ್ದರು.
ಶ್ರೀರಾಮನಲ್ಲಿ ನನಗೆ ಅಪಾರ ನಂಬಿಕೆ ಇದೆ. ಆತನ ಕೃಪಾ ಕಟಾಕ್ಷದಿಂದಲೇ ನಾನು ಇಷ್ಟು ವರ್ಷ ಬದುಕಲು ಸಾಧ್ಯವಾಗಿದ್ದು ಆತನ ಕರುಣೆಗೆ ನಾನು ಧನ್ಯವಾದ ಅರ್ಪಿಸುತ್ತೇನೆ ಎಂದರು. ಯಾದಿರೆಡ್ಡಿ ಅವರು ಇದೀಗ ಮುನ್ನ ಸಾಯಿ ಬಾಬಾ ಅವರಿಗೆ ಬೆಳ್ಳಿ ಕಿರೀಟವನ್ನು ಅರ್ಪಿಸಿದ್ದರು. ಇದೀಗ ಮುತ್ಯಾಲಂಪಡುವಿನಲ್ಲಿರುವ ಕೋದಂಡ ರಾಮನಿಗೆ 1.50 ಲಕ್ಷ ರುಪಾಯಿಯಲ್ಲಿ ಬೆಳ್ಳಿ ಕಿರೀಟ ಅರ್ಪಿಸಿದ್ದು ಜತೆಗೆ ನಿತ್ಯ ಅನ್ನದಾಸೋಹಕ್ಕಾಗಿ 20 ಸಾವಿರ ರುಪಾಯಿಯನ್ನು ನೀಡಿದ್ದಾರೆ.

Comments are closed.