ರಾಷ್ಟ್ರೀಯ

ಶಬರಿಮಲೆಗೆ ಭೂಮಾತಾ ಬ್ರಿಗೇಡ್ ನ ಮುಖ್ಯಸ್ಥೆ ತೃಪ್ತಿ ದೇಸಾಯಿಗೆ ಪ್ರವೇಶವಿಲ್ಲ: ಕೇರಳ ಸರ್ಕಾರ

Pinterest LinkedIn Tumblr

shabarimalafi
ಶಬರಿಮಲೆ: ಭೂಮಾತಾ ಬ್ರಿಗೇಡ್ ನ ಮುಖ್ಯಸ್ಥೆ ತೃಪ್ತಿ ದೇಸಾಯಿ ಅವರಿಗೆ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯದೊಳಗೆ ಪ್ರವೇಶ ನೀಡುವುದಿಲ್ಲ ಎಂದು ಕೇರಳ ಸರ್ಕಾರ ಸ್ಪಷ್ಟ ಪಡಿಸಿದೆ.
ತೃಪ್ತಿ ದೇಸಾಯಿ ಸುಮಾರು 100 ಮಹಿಳಾ ಕಾರ್ಯಕರ್ತರೊಂದಿಗೆ ಪವಿತ್ರ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಪ್ರವೇಶಿಸುವುದಾಗಿ ಹೇಳಿದ್ದಾರೆ. ಆದರೆ 10-50 ವರ್ಷದೊಳಗಿನ ಮಹಿಳೆಯರಿಗೆ ದೇವಾಲಯ ಪ್ರವೇಶ ನೀಡಬಾರದು ಎಂಬ ನಿರ್ಬಂಧವಿದೆ.
ಈ ಪ್ರಕರಣ ಸಂಬಂಧ ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದ್ದು, ತೀರ್ಪು ಬರುವವರೆಗೂ ಈ ಸಂಪ್ರದಾಯದಲ್ಲಿ ಯಾವುದೇ ಬದಲಾವಣೆ ಸಾಧ್ಯವಿಲ್ಲ ಎಂದು ತ್ರವಣ್ ಕೋರ್ ದೇವಾಸ್ವೋಮ್ ಮಂಡಳಿ ಸದಸ್ಯರೂ ಆಗಿರುವ ಸಚಿವ ಕದಕಾಂಪಳ್ಳಿ ಸುರೇಂದ್ರ ನಾಥ್ ತಿಳಿಸಿದ್ದಾರೆ.
ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಮಹಿಳೆಯರಿಗೆ ಪ್ರವೇಶ ಕಲ್ಪಿಸುವ ಸಂಬಂಧ ಕಳೆದ ತಿಂಗಳು ಸಿಪಿಐ(ಎಂ) ನೇತತ್ವದ ಎಲ್ ಡಿಎಫ್ ಸರ್ಕಾರ, ಸುಪ್ರೀಂಕೋರ್ಟ್ ಗೆ ಪ್ರಮಾಣ ಪತ್ರ ಸಲ್ಲಿಸಿದೆ.
100 ಮಹಿಳಾ ಕಾರ್ಯಕರ್ತರೊಂದಿಗೆ ಶಬರಿಮಲೆ ದೇವಾಸ್ಥಾನ ಪ್ರವೇಶಿಸು ಯೋಜನೆ ರೂಪಿಸಿರುವುದಾಗಿ ಇತ್ತೀಚೆಗಷ್ಟೇ ಭೂಮಾತಾ ಬ್ರಿಗೇಡ್ ನ ಮುಖ್ಯಸ್ಥೆ ತೃಪ್ತಿ ದೇಸಾಯಿ ಹೇಳಿದ್ದರು.

Comments are closed.