ರಾಷ್ಟ್ರೀಯ

ಸುಂದರ ರಾಜಸ್ಥಾನದಲ್ಲೊಂದು ಮಂದಿರ!

Pinterest LinkedIn Tumblr

rajstana
ರಾಜಸ್ಥಾನ ತನ್ನ ಐತಿಹಾಸಿಕ ಪರಂಪರೆ, ಕಲೆ ಹಾಗೂ ಸೌಂದರ್ಯದಿಂದಾಗಿ ಹಿಂದಿನ ಕಾಲದಿಂದ ಹಿಡಿದು ಇಂದಿಗೂ ಸಹ ತಮ್ಮ ಜನಪ್ರಿಯತೆ ಗಳಿಸಿದೆ. ಈ ಸುಂದರವಾದ ರಾಜಸ್ಥಾನದಲ್ಲೊಂದು ಮಂದಿರವಿದೆ. ಈ ಮಂದಿರ ತನ್ನ ಸೌಂದರ್ಯ ಮತ್ತು ರಹಸ್ಯದಿಂದಾಗಿ ಇಂದಿಗೂ ಜನರನ್ನು ತನ್ನತ್ತ ಆಕರ್ಷಿಸುತ್ತಿದೆ. ಆದರೆ ಇಂದಿಗೂ ಸಹ ಈ ಮಂದಿರಕ್ಕೆ ಸಂಬಂಧಿಸಿದ ರಹಸ್ಯವನ್ನು ತಿಳಿಯಲು ಯಾರಿಂದಲೂ ಸಾಧ್ಯವಾಗಲೇ ಇಲ್ಲ.

ಬಾಡ್‌ಮೇರ್ ಜಿಲ್ಲೆಯಲ್ಲಿರುವ ಕಿರಾಡುವಿನಲ್ಲಿರುವ ಒಂದು ಮಂದಿರ ಎಲ್ಲರಲೂ ಕುತೂಹಲ ಮೂಢಿಸಿದೆ. ಈ ಮಂದಿರದಲ್ಲಿ ಒಂದು ರಾತ್ರಿ ಮಲಗಿದರೆ ಮನುಷ್ಯರಾಗಲಿ ಅಥವಾ ಇನ್ನು ಯಾರೇ ಆಗಲಿ ಅವರು ಶಾಶ್ವತವಾಗಿ ಮಲಗಿಯೇ ಇರಬೇಕಾಗುತ್ತದೆ. ಅಂದರೆ ಅವರು ಕಲ್ಲಾಗಿ ಮಾರ್ಪಾಡು ಹೊಂದುತ್ತಾರೆ ಎಂದು ಹೇಳಲಾಗಿದೆ.

ಬಾಡ್‌ಮೇರ್ ಕಿರಾಡು ಮಂದಿರದ ರಹಸ್ಯ ಅದರ ಇತಿಹಾಸದಲ್ಲಿ ಅಡಗಿದೆ. ಮೊಘಲರ ಆಕ್ರಮಣದಿಂದಾಗಿ ಈ ತಾಣ ಇಂದು ಬದಲಾಗಿದೆ ಎಂದು ಕೆಲವರು ಹೇಳಿದರೆ, ಅಲ್ಲಿನ ಜನ ಸಾಧು ಒಬ್ಬರ ಶಾಪದಿಂದಾಗಿ ಈ ನಗರ ಕಲ್ಲಿನ ನಗರವಾಗಿ ಮಾರ್ಪಾಡು ಹೊಂದಿದೆ ಎಂದು ಹೇಳುತ್ತಾರೆ.

ಹಲವಾರು ವರ್ಷಗಳ ಹಿಂದೆ ಇಲ್ಲಿ ಒಬ್ಬ ಸಾಧು ತನ್ನ ಶಿಷ್ಯನೊಂದಿಗೆ ವಾಸವಾಗಿದ್ದರು. ಒಂದು ಬಾರಿ ಅವರು ದೇಶ ಸುತ್ತಲು ಹೊರಟರು. ಹಳ್ಳಿಗರ ಮೇಲಿನ ನಂಬಿಕೆಯಿಂದಾಗಿ ತನ್ನ ಶಿಷ್ಯನನ್ನು ಆಶ್ರಮದಲ್ಲಿಯೇ ಬಿಟ್ಟು ಹೊರಟರು. ಹಳ್ಳಿಯ ಜನರು ತನ್ನ ಸೇವೆ ಹೇಗೆ ಮಾಡುತ್ತಾರೋ ಅದೇ ರೀತಿ ತನ್ನ ಶಿಷ್ಯನ ಸೇವೆಯನ್ನು ಮಾಡುವರು ಎಂಬ ನಂಬಿಕೆ ಸಾಧುವಿನಲ್ಲಿತ್ತು.

ಆದರೆ ಸಾಧು ಹೋದ ನಂತರ ಒಬ್ಬ ವ್ಯಕ್ತಿಯನ್ನು ಬಿಟ್ಟು ಮತ್ತೆ ಯಾರೂ ಸಹ ಶಿಷ್ಯನ ಕಡೆ ಗಮನ ಹರಿಸಲೇ ಇಲ್ಲ. ಗುರುಗಳು ವಾಪಾಸು ಬಂದಾಗ ತನ್ನ ಶಿಷ್ಯ ರೋಗಕ್ಕೆ ತುತ್ತಾಗಿರುವುದು ಕಂಡು ಬಂತು. ಇದರಿಂದ ಕುಪಿತಗೊಂಡ ಸಾಧುಗಳು ಯಾವ ಜನರ ಹೃದಯದಲ್ಲಿ ಸಹಾಯ ಅನುಭೂತಿಯ ಭಾವನೆಯೇ ಇಲ್ಲ ಅವರೆಲ್ಲಾ ಕಲ್ಲಾಗಿ ಹೋಗಲಿ, ಪೂರ್ತಿ ನಗರ ಹಾಳಾಗಿ ಹೋಗಲಿ ಎಂದು ಶಾಪವಿತ್ತರು.

ನಂತರ ನೋಡು ನೋಡುತ್ತಿದ್ದಂತೆ ಎಲ್ಲಾ ಜನರು ಕಲ್ಲಾಗಿ ಮಾರ್ಪಾಡು ಹೊಂದಿದರು. ಶಿಷ್ಯನ ಸೇವೆ ಮಾಡಿದ ವ್ಯಕ್ತಿ ಮಾತ್ರ ಹಾಗೇ ಉಳಿದ. ಆತನನ್ನು ಗುರುಗಳು ಬೇರೆ ಊರಿಗೆ ಹೋಗುವಂತೆ ತಿಳಿಸಿದರು. ಅದರಂತೆ ಆತನಿಗೆ ಒಂದು ಸಲಹೆಯನ್ನು ಸಹ ನೀಡಿದರು. ನೀನು ಇಲ್ಲಿಂದ ಹೋಗುವಾಗ ಒಂದು ಬಾರಿಯೂ ಹಿಂದೆ ತಿರುಗಿ ನೋಡಲೇಬಾರದು ಎಂದು ತಿಳಿಸಿದರು.

ಆದರೆ ಹೋಗುತ್ತಿದ್ದವನಿಗೆ ಕುತೂಹಲ ಉಂಟಾಗಿ ಈ ಊರಿನ ಜನ ನಿಜವಾಗಿಯೂ ಕಲ್ಲು ಆಗುತ್ತಿದ್ದಾರೆಯೇ ಎಂದು ಕುತೂಹಲದಿಂದ ನೋಡಲು ಆತನು ಕಲ್ಲಾಗಿ ಪರಿವರ್ತನೆ ಹೊಂದಿದ. ಆತನ ಕಲ್ಲಿನ ಮೂರ್ತಿಯನ್ನು ಇಂದಿಗೂ ಸಹ ನೋಡಬಹುದು.

ಇದು ಇತಿಹಾಸವನ್ನು ಸಾರುತ್ತದೆ ಎಂದು ಹೇಳಲಾಗಿದೆ. ಇಂದಿಗೂ ಸಹ ಈ ದೇವಾಲಯಲ್ಲಿ ಒಂದು ರಾತ್ರಿ ಕಳೆದರೆ ಕಲ್ಲಾಗಿ ಪರಿವರ್ತನೆ ಹೊಂದುತ್ತಾರೆ ಎಂದು ಹೇಳಲಾಗಿದೆ.

Comments are closed.