ರಾಷ್ಟ್ರೀಯ

ಭಾರತದ ಪ್ರಧಾನಿ ನರೇಂದ್ರ ಮೋದಿಗೆ ಧನ್ಯವಾದ ಹೇಳಿದ ಪಾಕ್ ಪ್ರಧಾನಿ ನವಾಜ್ ಷರೀಫ್ ಪುತ್ರಿ!

Pinterest LinkedIn Tumblr

navaz
ನವದೆಹಲಿ, ಡಿ. ೨೭- ಪ್ರಧಾನಿ ನರೇಂದ್ರ ಮೋದಿಯವರಿಗೆ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಮಗಳು ಮರ್ಯಾಮ್ ನವಾಜ್ ಧನ್ಯವಾದ ಸಲ್ಲಿಸಿದ್ದಾರೆ.

ಹೌದು, ಇತ್ತೀಚೆಗೆ ಪಾಕ್ ಪ್ರಧಾನಿ ನವಾಜ್ ಷರೀಫ್ ಅವರ 68 ನೇ ವರ್ಷದ ಹುಟ್ಟುಹಬ್ಬ ಆಚರಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಟ್ವಿಟ್ಟರ್ ಮೂಲಕ ಶುಭಾಶಯ ಕೋರಿದ್ದರು. `ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ಅವರಿಗೆ ಆರೋಗ್ಯ ಹಾಗೂ ಧೀರ್ಘಾಯುಷ್ಯವನ್ನು ದೇವರು ಕರುಣಿಸಲಿ ಎಂದು ಪ್ರಾರ್ಥಿಸುವುದಾಗಿ’ ಮೋದಿ ಟ್ವೀಟ್ ಮಾಡಿದ್ದರು.

ಮೋದಿ ಶುಭಾಶಯ ಟ್ವಿಟ್‌ಗೆ ಪಾಕ್ ಪ್ರಧಾನಿ ಮಗಳು ಪ್ರತಿಕ್ರಿಯಿಸಿದ್ದು, ನಿಮ್ಮ ಶುಭಾಶಯಕ್ಕೆ ಧನ್ಯವಾದಗಳು. ನಿಮ್ಮ ಈ ಶುಭಾಶಯ ಮೆಸೇಜನ್ನು ನನ್ನ ತಂದೆಗೆ ತಿಳಿಸುವುದಾಗಿ ರಿಟ್ವೀಟ್ ಮಾಡಿದ್ದಾರೆ.

ಪ್ರಧಾನಿ ನವಾಜ್ ಷರೀಫ್ 1949ರ ಡಿಸೆಂಬರ್ 25ರಂದು ಜನಿಸಿದರು. 2013ರಲ್ಲಿ ಪಾಕಿಸ್ತಾನದ 18ನೇ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.

ಪಾಕಿಸ್ತಾನದ ಭಾರತದ ಮೇಲೆ ಉರಿ ಸೆಕ್ಟರ್‌ನಲ್ಲಿ ದಾಳಿ ನಡೆಸಿದ ಬಳಿಕ ಭಾರತ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಪ್ರವೇಶಿಸಿ ಸರ್ಜಿಕಲ್ ದಾಳಿ ನಡೆಸಿತ್ತು. ಆ ಬಳಿಕ ಪದೇ ಪದೇ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸುತ್ತಿದೆ. ಈ ಒತ್ತಡದ ಮಧ್ಯೆಯೂ ಪ್ರಧಾನಿ ನರೇಂದ್ರ ಮೋದಿಯವರು ಪಾಕ್ ಪ್ರಧಾನಿ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದರು.

Comments are closed.