ರಾಷ್ಟ್ರೀಯ

ಈ ಮನೆಯಲ್ಲಿ ಸೊಸೆಯರು ವಿಧವೆಯಂತೆ ಬಿಳಿ ಸೀರೆಯನ್ನೇ ಉಡಬೇಕು!

Pinterest LinkedIn Tumblr

maduve
ಛತ್ತೀಸ್’ಗಡ್(ಡಿ.20): ಕುಂಕುಮ, ಬಳೆ, ಹೂವು ಹೀಗೆ 16 ರೀತಿಯ ಶೃಂಗಾರದಿಂದ ಮುತ್ತೈದೆಯರನ್ನು ಗುರುತಿಸಲಾಗುತ್ತದೆ. ಆದರೆ ಛತ್ತೀಸ್’ಘಡ್’ನ ಕುಟುಂಬವೊಂದರ ಮುತ್ತೈದೆಯರು ಯಾವುದೇ ಶೃಂಗಾರ ಮಾಡುವಂತಿಲ್ಲ. ಕೇವಲ ಬಿಳಿ ಬಣ್ಣದ ಸೀರೆಯನ್ನಷ್ಟೇ ಉಡಬೇಕಾದ ಇವರು ಮುತ್ತೈದೆಯಾಗಿದ್ದರೂ ಓರ್ವ ವಿಧವೆಯಂತೆ ಬದುಕಬೇಕು.
ಇಲ್ಲಿನ ಕೋಸಮೀ ಎಂಬ ೂರಿನ ಕುಟುಂಬವೊಂದರಲ್ಲಿ ಈ ಪದ್ಧತಿ ಹಿಂದಿನಿಂದಲೂ ನಡೆದು ಬಂದಿದೆಯಂತೆ. ಇಲ್ಲಿನ ಮುತ್ತೈದೆಯರು ತಪ್ಪಿಯೂ ಯಾವುದೇ ಶೃಂಗಾರ ಮಾಡುವುದಿಲ್ಲ, ಬಣ್ಣದ ಸೀರೆಯನ್ನೂ ಉಡುವುದಿಲ್ಲ. ಶತಮಾನದಿಂದ ನಡೆದು ಬಂದ ಈ ಪದ್ಧತಿಯನ್ನು ಈ ಕುಟುಂಬದ ಸದಸ್ಯರು ಇಂದಿಗೂ ಚಾಚೂ ತಪ್ಪದೆ ಪಾಲಿಸುತ್ತಿದ್ದಾರೆ.
ಈ ಮನೆಯಲ್ಲಿ ಹಿರಿಯ ಸದಸ್ಯೆಯಿಂದ ನವ ವಧುವಿನವರೆಗಿನ ಎಲ್ಲರೂ ಕೇವಲ ಬಿಳಿ ಬಣ್ಣದ ಸೀರೆಯಲ್ಲಿ ಕಂಡು ಬರುತ್ತಾರೆ. ಎಷ್ಟೆಂದರೆ ಮದುವೆ ಮಂಟಪದಲ್ಲೂ ವಧು ಬಿಳಿ ಸೀರೆಯಲ್ಲಿ ಯಾವುದೇ ಶೃಂಗಾರವಿಲ್ಲದೇ ಕುಳಿತುಕೊಳ್ಳಬೇಕು. ಆದರೆ ಈ ಮನೆಯ ಹೆಣ್ಮಕ್ಕಳು ಬಣ್ಣದ ಬಟ್ಟೆ ಧರಿಸಿ ಶೃಂಗಾರ ಮಾಡುವ ಅವಕಾಶವಿದ್ದು, ಈ ನಿಯಮ ಕೇವಲ ಸೊಸೆಯರಿಗೆ ಅನ್ವಯಿಸುತ್ತದೆ.
ಅಚ್ಚರಿಯ ವಿಚಾರವೆಂದರೆ ಮನೆಯ ಸೊಸೆಯರು ಇಷ್ಟೊಂದು ಕಷ್ಟ ಪಟ್ಟರೂ ಎಲ್ಲರೂ ತಮ್ಮ ಮನೆಯ ಹೆಣ್ಮಕ್ಕಳನ್ನು ಈ ಮನೆಯ ಸೊಸೆಯಾಗಿಸಲು ಹಾತೊರೆಯುವುದರೊಂದಿಗೆ ಇದು ತಮ್ಮ ಸೌಭಾಗ್ಯ ಎನ್ನುತ್ತಿದ್ದಾರಂತೆ. ಒಂದು ವರ್ಷದ ಹಿಂದೆ ಈ ಮನೆಗೆ ಸೊಸೆಯಾಗಿ ಬಂದ ಪದವೀಧರೆ ಫಿರಂತನ್ ಭಾಯೀ ಎಂಬಾಕೆಯೂ ಇಂತಹ ಅಂಧ ಪದ್ಧತಿಯನ್ನು ಖುಷಿಯಾಗಿ ಪಾಲಿಸಿಕೊಂಡು ಹೋಗುತ್ತಿದ್ದಾಳೆ.
ಅದೇನಿದ್ದರೂ ಮದುವೆಯಾಗಿ ಮುತ್ತೈದೆಯಾಗಿ ಬಂದ ನವ ವಧು, ಶೃಂಗಾರ ಮಾಡಿ ಖುಷಿಯಾಗಿ ಇರಬೇಕು ಎಂಬುವುದು ನಮ್ಮ್ಲಿರುವ ಪದ್ಧತಿ. ಆದರೆ ಇದಕ್ಕೆ ವಿರುದ್ಧವಾಗಿ ಯಾವುದೇ ಶೃಂಗಾರವಿಲ್ಲದೆ ವಿಧವೆಯಂತೆ ಇರಬೇಕೆಂಬ ಈ ಪದ್ಧತಿ ಆಚರಿಸುವ ಹಿಂದಿನ ಕಾರಣ ಮಾತ್ರ ರಹಸ್ಯವಾಗಿದೆ.

Comments are closed.