ಕರ್ನಾಟಕ

ಭಿನ್ನ ಶಾಸಕರು ಜೆಡಿಎಸ್ ಗೆ ಬೇಡ: ಕುಮಾರಸ್ವಾಮಿ

Pinterest LinkedIn Tumblr

Kumaraswamy-650
ಮಂಡ್ಯ,ಡಿ.೨೫- ಅವರೆಲ್ಲಾ ತುಂಬಾ ದೊಡ್ಡವರು. ಅವರ ಬಗ್ಗೆ ಹೇಳುವುದು ಏನೂ ಉಳಿದಿಲ್ಲ. ಅಂಥವರು ನಮ್ಮ ಪಕ್ಷಕ್ಕೆ ಬೇಡವೇ ಬೇಡ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಪಕ್ಷ ಬಿಟ್ಟು ಹೋಗಿರುವ ಭಿನ್ನ ಶಾಸಕರ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ಅಡ್ಡ ಮತದಾನದ ಬಗ್ಗೆ ಕುಮಾರಸ್ವಾಮಿ ಅವರೊಂದಿಗೆ ಚರ್ಚಿಸಿದೆವು. ಈಗ ಯಾವ ದೇವಸ್ಥಾನಕ್ಕೆ ಬಂದು ಆಣೆ ಮಾಡಲು ಸಿದ್ಧ ಎಂಬ ಶಾಸಕ ಜಮೀರ್ ಅಹ್ಮದ್ ಖಾನ್ ಅವರ ಹೇಳಿಕೆಗೆ ತಿರುಗೇಟು ನೀಡಿದ ಎಚ್‌ಡಿಕೆ, ಈಗ ಆಣೆ ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಹೇಳಿದ್ದಾರೆ.
ಆ ಶಾಸಕರು ಅಡ್ಡಮತದಾನ ಮಾಡುವುದಾಗಿ ಮುಖಕ್ಕೆ ಹೊಡೆದಂತೆ ಹೇಳಿದ್ದರು. ನಂತರ ಅದರಂತೆ ನಡೆದುಕೊಂಡರು. ಈಗ ಅವರ ಬಗ್ಗೆ ಹೆಚ್ಚೇನೂ ಮಾತನಾಡುವ ಅಗತ್ಯವಿಲ್ಲ ಎಂದರು.
ನಂಜನಗೂಡು ವಿಧಾನ ಸಭಾ ಕ್ಷೇತ್ರದ ಉಪಚುನಾವಣೆಗೆ ನಮ್ಮ ಪಕ್ಷದಿಂದಲೂ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲಿದ್ದೇವೆ. ಸರಳ, ಸಜ್ಜನ, ಅಭ್ಯರ್ಥಿಯನ್ನು ಕಣಕ್ಕಿಳಿಸುವುದಾಗಿ ಒಂದು ತಿಂಗಳ ಹಿಂದೆಯೇ ಹೇಳಿದ್ದೇವೆ ಎಂದರು.

Comments are closed.