ರಾಷ್ಟ್ರೀಯ

‘ನೋಟು ನಿಷೇಧಿಸಿ ದೇಶ ಒಡೆದ ಮೋದಿ: ರಾಹುಲ್

Pinterest LinkedIn Tumblr

rahulala
ಧರ್ಮಶಾಲಾ: ‘ನೋಟು ರದ್ದತಿಯ ಮೂಲಕ ಪ್ರಧಾನಿ ನರೇಂದ್ರ ಮೋದಿ ಬಡವ ಮತ್ತು ಶ್ರೀಮಂತ ಎಂದು ದೇಶವನ್ನು ಇಬ್ಬಾಗ ಮಾಡಿದ್ದಾರೆ’ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿ ಕಿಡಿಕಾರಿದ್ದಾರೆ.

ಧರ್ಮಶಾಲಾದಲ್ಲಿ ಶನಿವಾರ ಕಾಂಗ್ರೆಸ್‌ ಸಮಾವೇಶದಲ್ಲಿ ಮಾತನಾಡಿದ ರಾಹುಲ್‌, ‘ಮೋದಿ ಇಬ್ಬಾಗ ಮಾಡಿರುವ ಭಾರತದಲ್ಲಿ ಒಂದೆಡೆ ಶೇಕಡ 1ರಷ್ಟು ಶ್ರೀಮಂತರು ಹಾಗೂ ಮತ್ತೊಂದೆಡೆ ಮಧ್ಯಮ ವರ್ಗದ ಜನ ಮತ್ತು ಬಡವರಿದ್ದಾರೆ’ ಎಂದು ಹೇಳಿದ್ದಾರೆ.

‘ನೋಟು ರದ್ದತಿಯಿಂದ ದೇಶದ ಆರ್ಥಿಕತೆಯ ಮೇಲೆ ಪ್ರತೀಕೂಲ ಪರಿಣಾಮ ಉಂಟಾಗಿದೆ. ಕೃಷಿ, ಪ್ರವಾಸೋದ್ಯಮದ ಮೇಲೆ ಇದರ ನೇರ ಪರಿಣಾಮವಾಗಿದೆ’ ಎಂದು ರಾಹುಲ್‌ ಆರೋಪಿಸಿದ್ದಾರೆ.

‘ಭಾರತದಲ್ಲಿ ಕಪ್ಪುಹಣ ಶೇಕಡ 6ರಷ್ಟು ಮಾತ್ರ ನಗದು ರೂಪದಲ್ಲಿದೆ. ಉಳಿದ ಶೇಕಡ 94ರಷ್ಟು ಕಪ್ಪುಹಣ ರಿಯಲ್‌ ಎಸ್ಟೇಟ್‌, ಚಿನ್ನ ಹಾಗೂ ವಿದೇಶಿ ಬ್ಯಾಂಕ್‌ಗಳಲ್ಲಿದೆ’ ಎಂದು ರಾಹುಲ್‌ ಹೇಳಿದ್ದಾರೆ.

‘ಬಿಜೆಪಿ ದೆಹಲಿಯಲ್ಲಿ ಬ್ಯಾಂಕ್‌ಗಳ ಮುಂದೆ ಸರದಿ ಸಾಲಲ್ಲಿ ನಿಂತಿದ್ದ ಬಡವರಿಗೆ ಮೂರು ರೂಪಾಯಿಯ ಲಡ್ಡು ಹಂಚಿತು. ಆದರೆ, ವಿಜಯ ಮಲ್ಯ ಅವರಿಗೆ ₹1,200 ಕೋಟಿಯ ಲಡ್ಡು ತಿನಿಸಿದೆ’ ಎಂದು ರಾಹುಲ್‌ ವ್ಯಂಗ್ಯವಾಡಿದ್ದಾರೆ.

Comments are closed.