ರಾಷ್ಟ್ರೀಯ

ಕಾರು ಖರೀದಿಸಲು ವಾಹನ ನಿಲುಗಡೆ ಸ್ಥಳಾವಕಾಶದ ಪ್ರಮಾಣ ಪತ್ರ ಅವಶ್ಯಕ: ವೆಂಕಯ್ಯ ನಾಯ್ಡು

Pinterest LinkedIn Tumblr

Venkayya-2
ನವದೆಹಲಿ: ‘ಭವಿಷ್ಯದಲ್ಲಿ ಗ್ರಾಹಕರು ಕಾರು ಕೊಳ್ಳುವ ಮೊದಲು ವಾಹನ ನಿಲುಗಡೆ ಸ್ಥಳಾವಕಾಶದ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಸಲ್ಲಿಸಬೇಕಾಗುತ್ತದೆ’ ಎಂದು ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ತಿಳಿಸಿದ್ದಾರೆ.

ಈಗಾಗಲೇ ಸರ್ಕಾರದ ಮಟ್ಟದಲ್ಲಿ ವಾಹನ ದಟ್ಟಣೆ ನಿಯಂತ್ರಣ ಕುರಿತು ಚಿಂತನೆ ನಡೆಯುತ್ತಿದ್ದು, ಕಡ್ಡಾಯ ಪ್ರಮಾಣ ಪತ್ರದ ಕ್ರಮವನ್ನು ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

‘ಮುಂದಿನ ದಿನಗಳಲ್ಲಿ ವಾಹನ ನಿಲುಗಡೆ ಸ್ಥಳಾವಕಾಶದ ಪ್ರಮಾಣ ಪತ್ರವಿಲ್ಲದೆ ಯಾವುದೇ ವಾಹನಗಳ ನೋಂದಣಿ ಸಾದ್ಯವಾಗುವುದಿಲ್ಲ. ಈ ನಿಯಮದ ಜಾರಿಗೆ ಬದ್ಧವಾಗಿದ್ದು ಸಾರಿಗೆ ಸಚಿವರ ಜೊತೆ ಚರ್ಚೆ ನಡೆಸಿದ್ದೇನೆ’ ಎಂದು ತಿಳಿಸಿದ್ದಾರೆ.

ದೆಹಲಿಯಲ್ಲಿ ನಡೆದ ಶೌಚಾಲಯ ಪತ್ತೆ ಮೊಬೈಲ್‌ ಆ್ಯಪ್‌ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು ‘ವಾಹನ ಖರೀದಿಗೆ ರೂಪಿಸಲು ಯೋಜಿಸಲಾಗುತ್ತಿರುವ ಮಾನದಂಡದಂತೆ, ಭವಿಷ್ಯದಲ್ಲಿ ಶೌಚಾಲಯ ರಹಿತ ನಿವಾಸಗಳ ನಿರ್ಮಾಣಕ್ಕೂ ಅವಕಾಶ ನೀಡುವುದಿಲ್ಲ’ ಎಂದು ತಿಳಿಸಿದರು.

Comments are closed.