ರಾಷ್ಟ್ರೀಯ

ವಾಯುಮಾಲಿನ್ಯ; ದಿಲ್ಲಿಯಲ್ಲಿ ಬಸ್ ಪ್ರಯಾಣ ದರ ಭಾರಿ ಕಡಿತ

Pinterest LinkedIn Tumblr

delhi-bus
ನವದೆಹಲಿ: ಸಾರ್ವಜನಿಕ ಪ್ರಯಾಣ ವ್ಯವಸ್ಥೆಯನ್ನು ಉಪಯೋಗಿಸಲು ಜನರಿಗೆ ಉತ್ತೇಜಿಸಿ, ಮಾಲಿನ್ಯದ ವಿರುದ್ಧ ಹೋರಾಡುವ ನಿಟ್ಟಿನಲ್ಲಿ ದೆಹಲಿ ಸರ್ಕಾರ ಬುಧವಾರ ಜನವರಿ ತಿಂಗಳಿಗೆ ಬಸ್ ಪ್ರಯಾಣ ದರದಲ್ಲಿ ಭಾರಿ ಕಡಿತಗೊಳಿಸಿ ಆದೇಶಿಸಿದೆ.
ಹವಾನಿಯಂತ್ರಿತ ಬಸ್ ಗಳಲ್ಲಿ ಈಗ ಗರಿಷ್ಠ ದರ ೧೦ ರೂ ಇದ್ದು, ಹಿಂದಿನ ೨೫ ರೂ ನಿಂದ ೧೫ ರು ಕಡಿತ ಕಂಡಿದೆ. ಇತರ ಬಸ್ ಗಳಲ್ಲಿ ಗರಿಷ್ಠ ದರವನ್ನು ೧೫ ರೂ ನಿಂದ ೫ ರೂಗೆ ಕಡಿತಗೊಳಿಸಲಾಗಿದೆ.
ದೆಹಲಿ ಸರ್ಕಾರ ಸುಮಾರು ೪೫೦೦ ಬಸ್ ಗಳ ಸೇವೆಯನ್ನು ಒದಗಿಸುತ್ತದೆ.
“ಚಳಿಗಾಲದ ಸಮಯದಲ್ಲಿ ಮಾಲಿನ್ಯ ತೀವ್ರಗೊಳ್ಳುವುದನ್ನು ತಗ್ಗಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ” ಎಂದು ಸಾರಿಗೆ ಸಚಿವ ಸತ್ಯೇಂದರ್ ಜೈನ್ ಹೇಳಿದ್ದು “ಜನ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಳಸಲು ಉತ್ತೇಜಿಸುವುದಕ್ಕೆ ದರ ಕಡಿತಗೊಳಿಸಿದ್ದೇವೆ” ಎಂದಿದ್ದಾರೆ.
ಈ ನಿರ್ಧಾರದಿಂದ ರಸ್ತೆಯ ಮೇಲೆ ಕಾರ್ ಗಳ ಸಂಖ್ಯೆ ಕಡಿಮೆಯಾಗುತ್ತದೆ ಎಂದು ನಂಬಿರುವುದಾಗಿ ಜೈನ್ ಹೇಳಿದ್ದಾರೆ.
ದೆಹಲಿ ವಿಶ್ವದಲ್ಲೇ ಅತಿ ಹೆಚ್ಚು ಮಾಲಿನ್ಯ ನಗರಿಗಳಲ್ಲಿ ಒಂದು.

Comments are closed.