ರಾಷ್ಟ್ರೀಯ

ಕೇವಲ ರೂ. 3,111ಕ್ಕೆ ಸ್ಪೈಸ್‌ಜೆಟ್‍ನಲ್ಲಿ ವಿದೇಶಿ ಪ್ರಯಾಣ 

Pinterest LinkedIn Tumblr

spicejet
ಅತ್ಯಂತ ಕಡಿಮೆ ಪ್ರಯಾಣ ದರದಲ್ಲಿ ಸೇವೆ ಕೊಡುತ್ತಿರುವ ವಿಮಾನಯಾನ ಸಂಸ್ಥೆ ಸ್ಪೈಸ್‌ಜೆಟ್. ವಿದೇಶಕ್ಕೆ ಹೋಗಬೇಕು ಎಂಬುವವರಿಗೆ ವಿಶೇಷ ರಿಯಾಯಿತಿ ಪ್ರಕಟಿಸಿದೆ. ಮುಂದಿನ ವರ್ಷದ ಹಬ್ಬಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ’ಫೆಸ್ಟಿವಲ್ ಸೀಸನ್’ ಹೆಸರಿನಲ್ಲಿ ರೂ.3,111ರಿಂದ ವಿದೇಶ ಪ್ರಯಾಣ ಸೌಲಭ್ಯವನ್ನು ಕೊಡುತ್ತಿರುವುದಾಗಿ ಹೇಳಿದೆ.

ಹೋಗುವ ಪ್ರಯಾಣಕ್ಕಷ್ಟೇ ಈ ದರ ಅನ್ವಯವಾಗಲಿದೆ. ಇದರಲ್ಲಿ ಎಲ್ಲಾ ರೀತಿಯ ತೆರಿಗೆ, ಶುಲ್ಕ ಸೇರಿವೆ ಎಂದು ತಿಳಿಸಿದೆ. ಎಲ್ಲೂ ನಿಲ್ಲದೆ (ನಾನ್ ಸ್ಟಾಪ್) ವಿಮಾನಗಳಿಗೆ ಮಾತ್ರವೇ ಈ ರಿಯಾಯಿತಿ ಅನ್ವಯವಾಗಲಿದೆ ಎಂದು ಪ್ರಕಟಿಸಿದೆ.

ಮಧುರೈ-ಕೊಲಂಬೋ ದರ ರೂ.3,111ರಷ್ಟಿದೆ. ಕೊಚ್ಚಿ, ಕೋಜಿಕೋಡ್‌ನಿಂದ ದುಬೈ ಟಿಕೆಟ್ ಬೆಲೆ ರೂ.4,799ರಿಂದ ಆರಂಭವಾಗುತ್ತದೆ. ಮುಂದಿನ ವರ್ಷ ಜನವರಿ 15ರಿಂದ ಅಕ್ಟೋಬರ್ 28ರ ನಡುವಿನ ಪ್ರಯಾಣಕ್ಕೆ ಒಂದು ದಿನ ಕಾಲಾವಕಾಶ ಕೊಟ್ಟಿದೆ. ಕೇವಲ ಕೆಲವೇ ಕೆಲವು ಸೀಟ್‍ಗಳಿವೆಯಂದೂ, ಮೊದಲು ಬಂದವರೆ ಮೊದಲ ಆದ್ಯತೆ ಎಂದು ಸ್ಪೈಸ್‍ಜೆಟ್ ಹೇಳಿದೆ.

Comments are closed.