ರಾಷ್ಟ್ರೀಯ

ಮುಸ್ಲಿಮೇತರ ಸ್ಫೋಟ ಪ್ರಕರಣಗಳಲ್ಲಿ ತನಿಖೆ ವಿಳಂಬ: ಅಸಾವುದ್ದೀನ್ ಒವೈಸಿ

Pinterest LinkedIn Tumblr

Asaduddin Owaisiನವದೆಹಲಿ: ದಿಲ್ ಸುಖ್ ನಗರ ಬಾಂಬ್ ಸ್ಫೋಟ ಪ್ರಕರಣದಲ್ಲಿ ಯಾಸೀನ್ ಭಟ್ಕಳ್ ಸೇರಿ ಐವರಿಗೆ ಕೋರ್ಟ್ ಗಲ್ಲು ಶಿಕ್ಷೆ ಪ್ರಕಟಿಸಿದ ಬೆನ್ನಲ್ಲೇ ಸಂಸದ ಅಸಾವುದ್ದೀನ್ ಓವೈಸಿ ಮುಸ್ಲಿಮೇತರ ಬಾಂಬ್ ಸ್ಫೋಟ ಪ್ರಕರಣಗಳಲ್ಲಿ ಎನ್ಐಎ ತನಿಖೆ ವಿಳಂಬವಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಸರಣಿ ಟ್ವೀಟ್ ಮಾಡಿರುವ ಅಸಾವುದ್ದೀನ್ ಓವೈಸಿ, 2013ರ ದಿಲ್ ಸುಖ್ ನಗರ ಸ್ಫೋಟ ಪ್ರಕರಣ ಆರೋಪಿಗಳಿನ್ನು ಅಪರಾಧಿಗಳನ್ನಾಗಿ ಘೋಷಿಸಲಾಗುತ್ತದೆ. ಮೆಕ್ಕಾ ಮಸ್ಜೀದ್ ಸ್ಫೋಟ, ಅಜ್ಮೀರ್ ದರ್ಗಾ ಸ್ಫೋಟ, ಮಾಲೇಗಾಂವ್ ಸ್ಫೋಟ ಪ್ರಕರಣಗಳಲ್ಲಿ ಎನ್ಐಎ ಅಪರಾಧಿಗಳನ್ನು ಘೋಷಿಸುತ್ತದೆಯೇ ಎಂದು ಪ್ರಶ್ನಿಸಿದ್ದಾರೆ.
ದಿಲ್ ಸುಖ್ ನಗರ ಸ್ಫೋಟ ಪ್ರಕರಣದಲ್ಲಿ ತೋರಿದ ಪ್ರಗತಿ, ಅವಸರವನ್ನು ಅಜ್ಮೀರ್ ದರ್ಗಾ ಸ್ಫೋಟ, ಮಾಲೇಗಾಂವ್ ಸ್ಫೋಟ, ಬಾಬ್ರಿ ಮಸೀದಿ ಧ್ವಂಸ ಪ್ರಕರಣಗಳಲ್ಲಿ ಏಕೆ ತೋರುವುದಿಲ್ಲ, ದಿಲ್ ಸಿಖ್ ನಗರ ಸ್ಫೋಟ ಪ್ರಕರಣದ ಆರೋಪಿಗಳಿಗೆ 3 ವರ್ಷಗಳಲ್ಲಿ ಶಿಕ್ಷೆ ಪ್ರಕಟವಾಗುತ್ತದೆ. ಆದರೆ ಮುಸ್ಲಿಮೇತರ ಪ್ರಕರಣಗಳ ಇತ್ಯರ್ಥ ವಿಳಂಬವಾಗುತ್ತಿವೆ ಎಲ್ಲಾ ಅಪರಾಧಿಗಳನ್ನು ನಿರಪರಾಧಿಗಳೆಂದು ಘೋಷಿಸಿದರೂ ಅಚ್ಚರಿ ಇಲ್ಲ ಎಂದು ಅಸಾವುದ್ದೀನ್ ಓವೈಸಿ ಹೇಳಿದ್ದಾರೆ.

Comments are closed.