ರಾಷ್ಟ್ರೀಯ

ಕಪ್ಪು ಹಣ ಕುರಿತು 72 ಗಂಟೆಗಳಲ್ಲಿ 4000 ಇ ಮೇಲ್

Pinterest LinkedIn Tumblr

gmail
ನವದೆಹಲಿ: ಕಪ್ಪು ಹಣ ಹೊಂದಿರುವವರ ಕುರಿತು ಇ ಮೇಲ್ ಮೂಲಕ ಮಾಹಿತಿ ನೀಡುವಂತೆ ಕೇಂದ್ರ ಸರ್ಕಾರ ಮನವಿ ಮಾಡಿದ ನಂತರ 72 ಗಂಟೆಗಳಲ್ಲಿ ಸುಮಾರು 4000 ಸಂದೇಶಗಳು ಆದಾಯ ತೆರಿಗೆ ಇಲಾಖೆಯ ಇ ಮೇಲ್ ಐಡಿಗೆ ಬಂದಿದೆ.

ಕಳೆದ ಶುಕ್ರವಾರ ಕೇಂದ್ರ ಸರ್ಕಾರ ಇ ಮೇಲ್ ಕಳುಹಿಸುವಂತೆ ಮಾಡಿರುವ ಮನವಿಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಪ್ರಸ್ತುತ ಬಂದಿರುವ ಇ ಮೇಲ್ಗಳನ್ನು ಕೂಲಂಕುಶವಾಗಿ ತಪಾಸಣೆಗೆ ಒಳಪಡಿಸಲಾಗುವುದು, ಕಪ್ಪುಹಣ ಹೊಂದಿರುವವರ ಕುರಿತು ನೀಡಿರುವ ಮಾಹಿತಿ ನಿಜವಾಗಿದ್ದಲ್ಲಿ ತನಿಖೆ ಪ್ರಾರಂಭಿಸಲಾಗುವುದು. ಕಪ್ಪು ಹಣ ಹೊಂದಿರುವವ ಕುರಿತು ಜನರು ಒದಗಿಸುತ್ತಿರುವ ಮಾಹಿತಿಯಿಂದ ಸರ್ಕಾರ ಕಪ್ಪು ಹಣದ ವಿರುದ್ಧ ಸಮರ್ಥವಾಗಿ ಹೋರಾಡಲು ಸಾಧ್ಯವಿದೆ ಎಂದು ಹಣಕಾಸು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರತೀ ದಿನ ಬ್ಯಾಂಕುಗಳಲ್ಲಿ ಜಮೆಯಾಗುತ್ತಿರುವ ಹಣ ಮತ್ತು ವಿಥ್ಡ್ರಾ ಆಗುತ್ತಿರುವ ಮೊತ್ತ, ಹಾಗೂ ಎಲ್ಲಾ ವಿಧದ ವ್ಯವಹಾರಗಳ ಕುರಿತು ಹಣಕಾಸು ಸಚಿವಾಲಯಕ್ಕೆ ಮಾಹಿತಿ ರವಾನೆಯಾಗುತ್ತಿದೆ. ಇದೇ ಸಂದರ್ಭದಲ್ಲಿ ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯ ಸೇರಿದಂತೆ ಇತರೆ ತನಿಖಾ ಸಂಸ್ಥೆಗಳಿಗೂ ಸಹ ಈ ಮಾಹಿತಿಯನ್ನು ಒದಿಗಸಲಾಗುತ್ತಿದೆ. ಚಿನ್ನಾಭರಣಗಳು, ಐಷಾರಾಮಿ ವಸ್ತುಗಳು ಮತ್ತು ಆಸ್ತಿ ಖರೀದಿ ಸೇರಿದಂತೆ ಅಧಿಕ ಮೊತ್ತದ ಸಂಶಯಾಸ್ಪದ ವ್ಯವಹಾರಗಳ ಮೇಲೆ ಹದ್ದಿನ ಕಣ್ಣಿಡಲಾಗಿದೆ ಎಂದು ಹಣಕಾಸು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

Comments are closed.