ರಾಷ್ಟ್ರೀಯ

ನಗದು ರಹಿತ ವಹಿವಾಟು ನೋಟು ಕೊರತೆ ನೀಗಲಿದೆ: ಅರುಣ್ ಜೇಟ್ಲಿ

Pinterest LinkedIn Tumblr

arun jetlyನವದೆಹಲಿ: ನೋಟು ರದ್ದತಿ ಬಳಿಕ ಬ್ಯಾಂಕ್‌ಗಳಲ್ಲಿ ಜಮೆಯಾಗುವ ಎಲ್ಲಾ ನೋಟುಗಳನ್ನು ಮಾನ್ಯ ಮಾಡುವುದಿಲ್ಲ. ಚಲಾವಣೆಯಲ್ಲಿದ್ದ ₹15.44 ಲಕ್ಷ ಕೋಟಿ ನೋಟುಗಳು ಹಾಗೂ ಹೊಸ ನೋಟುಗಳ ನಡುವಿನ ಅಂತರವನ್ನು ಡಿಜಿಟಲ್‌ ಮೊತ್ತ ತುಂಬಲಿದೆ ಎಂದು ಹಣಕಾಸು ಸಚಿವ ಅರುಣ್‌ ಜೇಟ್ಲಿ ಹೇಳಿದ್ದಾರೆ.

ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ (ಎಫ್‌ಐಸಿಸಿಐ) ಶನಿವಾರ ಆಯೋಜಿಸಿದ್ದ 89ನೇ ವಾರ್ಷಿಕ ಸಾಮಾನ್ಯಸಭೆಯಲ್ಲಿ ಮಾತನಾಡಿದ ಅವರು, ₹500, ₹1,000 ಮುಖಬೆಲೆಯ ನೋಟು ರದ್ದತಿಯ ನಿರ್ಧಾರ ‘ಒಂದು ಧೈರ್ಯದ ಹೆಜ್ಜೆ’ ಎಂದು ಅವರು ಬಣ್ಣಿಸಿದ್ದಾರೆ.

ನಗದು ಬಳಕೆಯನ್ನು ತಗ್ಗಿಸಿ, ನಗದು ರಹಿತ ವಹಿವಾಟು ಉತ್ತೇಜನಕ್ಕೆ ಜಾಗೃತಿ ಮೂಡಿಸುವ ಮೂಲಕ ಎಲ್ಲಾ ಬಗೆಯ ಯತ್ನ ಮಾಡಲಾಗುತ್ತಿದೆ. ಹಿಂಪಡೆದ ನೋಟುಗಳ ಚಲಾವಣೆಯಲ್ಲಿದ್ದ ಸಂಖ್ಯೆ ಹಾಗೂ ಹೊಸ ನೋಟುಗಳ ನಡುವಿನ ಅಂತರವನ್ನು ಡಿಜಿಟಲ್‌ ಮೊತ್ತ ತುಂಬಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ನೋಟು ರದ್ದತಿಯಿಂದ ಕೆಲ ದಿನದ ಮಟ್ಟಿಗೆ ತೊಂದರೆ ಉಂಟಾಗಿರಬಹುದು. ಆದರೆ, ಇದು ದೀರ್ಘಕಾಲದ ಲಾಭವನ್ನು ನೀಡಲಿದೆ. ಈ ಬಗ್ಗೆ ನಮಗೆ ಭರವಸೆ ಇದೆ ಎಂದಿದ್ದಾರೆ.

Comments are closed.