ರಾಷ್ಟ್ರೀಯ

ಆಂಧ್ರ ಕಾರ್ಮಿಕನ ಖಾತೆಗೆ 1.26 ಕೋಟಿ ರು. ಜಮಾ!

Pinterest LinkedIn Tumblr

two-thousand_notes_seizedವಿಜಯವಾಡ: ನೋಟ್ ನಿಷೇಧದ ಪರಿಣಾಮ ದಿನಗೂಲಿ ಕಾರ್ಮಿಕನೊಬ್ಬ ರಾತ್ರೋರಾತ್ರಿ ಕೋಟ್ಯಾಧೀಶನಾದ ಅಚ್ಚರಿಯ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ!
ನಝಿರ್ ಎಂಬ ವ್ಯಕ್ತಿ ಕಳೆದ ಬುಧವಾರ ತನ್ನ ಖಾತೆಗೆ ಕೇವಲ 250 ರುಪಾಯಿ ಜಮೆ ಮಾಡಿದ್ದಾನೆ. ಇದಾದ ಬಳಿಕ ಆತನ ಖಾತೆಗೆ 1,26,76,436 ರುಪಾಯಿ ಜಮೆಯಾಗಿದೆ ಎಂದು ಮೊಬೈಲ್ ಗೆ ಮೆಸೇಜ್ ಬಂದಿದೆ.
ಅಚ್ಚರಿಗೊಂಡ ನಝಿರ್ ಎಟಿಎಂಗೆ ಹೋಗಿ ಮಿನಿ ಸ್ಟೇಟ್ ಮೆಂಟ್ ತೆಗೆದುಕೊಂಡಿದ್ದಾನೆ. ಅದರಲ್ಲೂ 1.26 ಕೋಟಿ ರುಪಾಯಿ ಬ್ಯಾಲೆನ್ಸ್ ತೋರಿಸಿದೆ. ಇದರಿಂದ ಮತ್ತಷ್ಟು ಆಘಾತಗೊಂಡ ನಝರಿ ಬ್ಯಾಂಕ್ ಅಧಿಕಾರಿಗಳನ್ನು ಭೇಟಿ ಮಾಡಿ ವಿಚಾರಿಸಿದ್ದಾನೆ.
ಈ ಹಣ ಹೇಗೆ ಜಮೆಯಾಯಿತು ಎಂಬುದು ನಮ್ಮ ಗಮನಕ್ಕೂ ಬಂದಿಲ್ಲ ಎಂದು ಹೇಳಿದ್ದು, ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ನಝಿರ್ ಅವರು ಎರಡು ತಿಂಗಳ ಹಿಂದಷ್ಟೇ ಚಿತ್ತೂರು ಜಿಲ್ಲೆಯ ಅಮಿಲೆಪಲ್ಲಿ ಗ್ರಾಮದ ಆಂಧ್ರ ಬ್ಯಾಂಕ್ ನಲ್ಲಿ ಖಾತೆ ತೆಗೆದಿದ್ದರು. ಹಾಗ ಅವರ ಬ್ಯಾಂಕ್ ಬ್ಯಾಲೆನ್ಸ್ ಕೇವಲ 192 ರುಪಾಯಿ. ಈಗ 1.26 ಕೋಟಿ!

Comments are closed.