ರಾಷ್ಟ್ರೀಯ

ಕಾಶ್ಮೀರದಲ್ಲಿ ಮಹಿಳಾ ಮೇಜರ್ ಪಿಸ್ತೂಲ್​ನಿಂದ ಗುಂಡು ಹೊಡೆದುಕೊಂಡು  ಆತ್ಮಹತ್ಯೆ

Pinterest LinkedIn Tumblr

pistool-in-kapselಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಮೇಜರ್ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳಾ ಅಧಿಕಾರಿಯೊಬ್ಬರು ಪಿಸ್ತೂಲ್ನಿಂದ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 36 ವರ್ಷದ ಅನಿತಾ ಕುಮಾರಿ ಎಂದು ಗುರುತಿಸಲಾಗಿದೆ. ಶುಕ್ರವಾರ ಕರ್ತವ್ಯಕ್ಕೆ ಹಾಜರಾಗದಿದ್ದಾಗ ವಿಚಾರಣೆ ನಡೆಸುವ ವೇಳೆ ಮನೆಯಲ್ಲೇ ಗುಂಡು ಹೊಡೆದುಕೊಂಡು ಸಾವಿಗೀಡಾಗಿರುವುದು ಕಂಡುಬಂದಿದೆ. ಡಿ.14-15ರ ಮಧ್ಯರಾತ್ರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಕೃತ್ಯಕ್ಕೆ ನಿಖರ ಕಾರಣಗಳು ತಿಳಿದುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಅನಿತಾ ಹಿಮಾಚಲ ಪ್ರದೇಶದ ಚಂಬಾ ಪ್ರದೇಶವರು ಎನ್ನಲಾಗಿದೆ.

Comments are closed.