ರಾಷ್ಟ್ರೀಯ

ದಿಲ್ಲಿಯಲ್ಲಿ ಮತ್ತೊಂದು ನಿರ್ಭಯಾ ಅತ್ಯಾಚಾರ ಪ್ರಕರಣ

Pinterest LinkedIn Tumblr

delhi-rapeನವದೆಹಲಿ(ಡಿ.16): ಅತ್ಯಾಚಾರಿಗಳ ಅಟ್ಟಹಾಸಕ್ಕೆ ರಾಷ್ಟ್ರರಾಜಧಾನಿ ನವದೆಹಲಿ ಜನ ಮತ್ತೆ ಬೆಚ್ಚಿ ಬಿದ್ದಿದೆ. ನಿರ್ಭಯಾ ಅತ್ಯಾಚಾರ ಮಾದರಿಯಲ್ಲೇ ದೆಹಲಿಯಲ್ಲಿ ಮತ್ತೊಂದು ಪ್ರಕರಣ ನಡೆದಿದೆ. ಲಿಫ್ಟ್ ಕೊಡುವ ನೆಪದಲ್ಲಿ ಯುವತಿಯನ್ನು ಕಾರಿನಲ್ಲಿ ಕರೆದೊಯ್ದು ಅತ್ಯಾಚಾರ ನಡೆಸಲಾಗಿದೆ.
ದೆಹಲಿಯ ಮೋತಿಭಾಗ್ ಪ್ರದೇಶದಲ್ಲಿ ನಿನ್ನೆ ರಾತ್ರಿ ಈ ಘಟನೆ ನಡೆದಿದ್ದು, ಜೀವ ಬೆದರಿಕೆ ಹಾಕಿ ಅತ್ಯಾಚಾರ ನಡೆಸಲಾಗಿದೆ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿ ರಾತ್ರಿ ಮನೆಗೆ ತೆರಳಲು ಕಾರು ಹತ್ತಿದ್ದಳು. ಈ ವೇಳೆ ಕಾರು ಚಾಲಕ ಅಮನ್ಕುಮಾರ್ ಯುವತಿ ಮೇಲೆ ಅತ್ಯಾಚಾರ ಎಸಗಿದ್ದಾನೆ. ಇನ್ನು ಆರೋಪಿ ಬಳಸಿದ್ದ ಕಾರಿನಲ್ಲಿ ಕೇಂದ್ರ ಸಚಿವಾಲಯದ ಸ್ಟಿಕ್ಕರ್ ಇತ್ತು ಎಂಬ ಮಾಹಿತಿ ತಿಳಿದುಬಂದಿದೆ. ಆರೋಪಿ ಅಮನ್ ಕುಮಾರ್’ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ.
ಇನ್ನು 2012ರಲ್ಲಿ ಇದೇ ದಿನ ನಿರ್ಭಯಾ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿತ್ತು. ಚಲಿಸುತ್ತಿದ್ದ ಬಸ್’ನಲ್ಲೇ ನಿರ್ಭಯಾ ಮೇಲೆ 6 ಮಂದಿ ಸಾಮೂಹಿಕ ಅತ್ಯಾಚಾರವೆಸಗಿದ್ದರು. ಅಸ್ವಸ್ಥಗೊಂಡಿದ್ದ ನಿರ್ಭಯಾ 13 ದಿನ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸಿ ಸಿಂಗಾಪುರದಲ್ಲಿ ಮೃತಪಟ್ಟಿದ್ದಳು. ಇದೀಗ ಮತ್ತೆ ಅಂತದ್ದೇ ದುರ್ಘಟನೆ ನಡೆದಿದ್ದು ದೆಹಲಿ ಜನ ಮತ್ತೆ ಬೆಚ್ಚಿ ಬಿದ್ದಿದ್ದಾರೆ.
2012ರ ಇದೇ ದಿನ ನಡೆದಿದ್ದೇನು?
2012ರ ಡಿಸೆಂಬರ್ 16ರಂದು ನಿರ್ಭಯಾ ಎಂಬ ಯುವತಿ ಮೇಲೆ ಅತ್ಯಾಚಾರ ನಡೆದಿತ್ತು. ವೈದ್ಯಕೀಯ ಓದುತ್ತಿದ್ದ 23 ವರ್ಷದ ನಿರ್ಭಯಾ ಸಿನಿಮಾ ವೀಕ್ಷಿಸಿ ರಾತ್ರಿ ಮನೆಗೆ ತೆರಳುತ್ತಿದ್ದಾಗ ೀ ಘಟನೆ ಸಂಭವಿಸಿತ್ತು. ಜೊತೆಗಿದ್ದ ಸ್ನೇಹಿತನನ್ನು ಥಳಿಸಿ ಕಟ್ಟಿ ಹಾಕಿ, ಚಲಿಸುತ್ತಿದ್ದ ಬಸ್ನಲ್ಲೇ ನಿರ್ಭಯಾ ಮೇಲೆ 6 ಮಂದಿ ಅತ್ಯಾಚಾರ ಎಸಗಿದ್ದರು ಆ ಕಿರಾತಕರು. ಬಳಿಕ ಬಸ್ನಿಂದ ನಿರ್ಭಯಾ ಹಾಗೂ ಆಕೆಯ ಸ್ನೇಹಿತನನ್ನು ಬಸ್’ನಿಂದ ಹೊರದಬ್ಬಿ ಪರಾರಿಯಾಗಿದ್ದರು.
ತೀವ್ರ ಅಸ್ವಸ್ಥಗೊಂಡಿದ್ದ ನಿರ್ಭಯಾಳನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. 13 ದಿನ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸಿದ್ದ ನಿರ್ಭಯಾ ಸಾವನ್ನಪ್ಪಿದ್ದಳು. 2012ರ, ಡಿಸೆಂಬರ್ 29ರಂದು ಸಿಂಗಾಪುರದ ಆಸ್ಪತ್ರೆಯಲ್ಲಿ ನಿರ್ಭಯಾ ಸಾವು ಪ್ರಕರಣದ ಎಲ್ಲಾ ಅಪರಾಧಿಗಳಿಗೂ ಸುಪ್ರೀಂಕೋರ್ಟ್ ಗಲ್ಲುಶಿಕ್ಷೆ ವಿಧಿಸಿತ್ತು. ನಿರ್ಭಯಾ ಪ್ರಕರಣ ದೇಶಾದ್ಯಂತ ಭಾರಿ ಸಂಚಲನ ಮೂಡಿಸಿತ್ತು.

Comments are closed.