ರಾಷ್ಟ್ರೀಯ

ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಗೆಳತಿ ಶಶಿಕಲಾಗೆ ಅಡಿಯಾಳಾಗಿದ್ದೇಕೆ?

Pinterest LinkedIn Tumblr

shasikalaಜಯಲಲಿತಾ, ತಮಿಳುನಾಡನ್ನೇ ಆಳುತ್ತಾ ಇದ್ದ ಅರಸಿ. ಆದರೆ ಈ ಅರಸಿ, ಶಿಕಲಾಗೆ ಅಡಿಯಾಳಾಗಿದ್ದಳಾ? ಈ ಪ್ರಶ್ನೆ ಇದೀಗ ಎಲ್ಲರನ್ನೂ ಕಾಡುತ್ತಿದೆ. ಯಾಕೆಂದರೆ, ಶಶಿಕಲ ಹಾಕುತ್ತಿದ್ದ ಗೆರೆ ಜಯಲಲಿತಾ ದಾಟುತ್ತಲೇ ಇರಲಿಲ್ಲ. ಜಯಲಲಿತಾ ಶಶಿಕಲಾ ಕೈಗೊಂಬೆಯಾಗಿದ್ದು ಯಾಕೆ? ಜಯಲಲಿತಾರ ಸೀಕ್ರೆಟ್ ಶಶಿಕಲಾ ಹತ್ತಿರ ಇತ್ತಾ? ಹಾಗಾದ್ರೆ ಈ ಸ್ಟೋರಿ ಓದಿ
ಜಯಲಲಿತಾ, ಎಲ್ಲೋ ಹುಟ್ಟಿ ಎಲ್ಲೋ ಬೆಳೆದು, ಎಲ್ಲೋ ಜನಪ್ರಿಯತೆ ಗಳಿಸಿದ ಅಪ್ರತಿಮ ಚೆಲುವೆ. ಒಂದು ಕಾಲದಲ್ಲಿ ನಟನೆಯೇ ಜೀವಾಳವಾಗಿತ್ತು. ನಟನೆ ಬಿಟ್ಟರೆ, ಮುಂದೇನು ಎನ್ನುವ ಆಲೋಚನೆಯೇ ಜಯಲಲಿತಾಗೆ ಇರಲಿಲ್ಲ. ತಮಿಳು ಸಿನಿಮಾಗಳಲ್ಲಿ ಜಯಲಲಿತಾ ಫುಲ್ ಬ್ಯುಸಿಯಾಗಿದ್ದ ಕಾಲ ಅದು. ಎಲ್ಲಾ ಪ್ರೊಡ್ಯೂಸರ್’ಗಳು, ನಮ್ಮ ಚಿತ್ರಕ್ಕೆ ಜಯಲಲಿತಾನೇ ಬೇಕು ಅಂತಿದ್ದ ಕಾಲ ಅದು. ಆದರೆ ಜಯಲಲಿತಾ ಅವರನ್ನು ತಮಿಳುನಾಡಿನ ಅಮ್ಮನನ್ನಾಗಿ ಮಾಡಿದ ಮಾಸ್ಟರ್ ಮೈಂಡ್ ಮಾತ್ರ ಆಪ್ತ ಗೆಳತಿ ಶಶಿಕಲಾರದ್ದು.
ಎಂಜಿಆರ್ ಸಾವಿನ ನಂತರ ನೋವಲ್ಲಿ ಮುಳುಗಿತು ಜಯಲಲಿತಾ ಬದುಕು: ಎಂಜಿಆರ್ ಪತ್ನಿ ಜಾನಕಿಯಿಂದಲೂ ಟಾರ್ಚರ್?
ಎಂಜಿಆರ್ ಬದುಕಿದ್ದಷ್ಟು ದಿನ, ಜಯಲಲಿತಾರ ಎಲ್ಲಾ ಬೇಕು ಬೇಡುಗಳನ್ನ ಅವರೇ ನಿರ್ಧರಿಸುತ್ತಿದ್ದರರು. ಆದರೆ ಎಂಜಿಆರ್ ವಿಧಿವಶರಾದ ನಂತರ, ಜಯಲಲಿತಯಾಗೆ ದಿಕ್ಕೇ ತೋಚದಂತಾಗಿತ್ತು. ಇಷ್ಟಲ್ಲದೇ ಎಂಜಿಆರ್ ವಿಧಿವಶರಾದ ನಂತರ, ಅವರ ಪತ್ನಿ ಜಾನಕಿ ಪಕ್ಷದ ಉಸ್ತುವಾರಿ ವಹಿಸಿಕೊಂಡಿದ್ದರು. ಆಗ ಜಯಲಲಿತಾ ಅನುಭವಿಸಿದ್ದ ಸಂಕಷ್ಟಗಳು ಅಂತಿಂಥಾದ್ದಲ್ಲ. “ಹಳೆಯ ಜಯಲಲಿತಾ ಈಗಿಲ್ಲ. ಯಾರು ನೋಯಿಸಿದರೂ, ಎಲ್ಲವನ್ನೂ ಸಹಿಸಿಕೊಳ್ಳುತ್ತಿದ್ದಳು. ಯಾರಿಗೆ ಹೇಗೆ ಉತ್ತರಿಸಬೇಕು ಎನ್ನುವುದೂ ಗೊತ್ತಿರಲಿಲ್ಲ. ಸದಾ ಸುಮ್ಮನಿರುತ್ತಿದ್ದಳು. ಮನೆಗೆ ಹೋಗಿ ಬಾಗಿಲು ಮುಚ್ಚಿಕೊಂಡು ಅಳುತ್ತಿದ್ದಳು. ಆ ಜಯಲಲಿತಾ ಈಗಿಲ್ಲ. ಈಗ ನನಗೆ ಯಾರಾದರೂ ಒಂದು ಏಟು ಕೊಟ್ಟರೂ, ನಾನು ನಾನು ಅವರಿಗೆ ಹತ್ತು ತಿರುಗೇಟು ಕೊಡುತ್ತೇನೆ.ಈಗ ನಾನು ಯಾರಿಗೂ ಅಂಜುವುದಿಲ್ಲ. ಬದುಕು ನನ್ನನ್ನ ಹೀಗೆ ಬದಲಾಯಿಸಿದೆ” ಹೀಗಂತ ಒಂದು ಸಂದರ್ಶನದಲ್ಲಿ ಜಯಲಲಿತಾ ಹೇಳಿದ ಮನದಾಳದ ಮಾತುಗಳು. ಇವರನ್ನು ಈ ಮಟ್ಟಕ್ಕೆ ಸ್ಟ್ರಾಂಗ್ ಆಗಿ ಮಾಡಿದ್ದು ಗೆಳತಿ ಶಶಿಕಲ. ಮತ್ತು ಈಕೆ ಕಟ್ಟಿದ ಮನ್ನಾರ್ಗುಡಿ ಗ್ಯಾಂಗ್.
ಜಯಾಗಾಗಿ ಭದ್ರಕೋಟೆ ನಿರ್ಮಿಸಿದ ಶಶಿಕಲಾ: ಜಯಾಗಾಗಿ ಒಂದು ಗ್ಯಾಂಗನ್ನೇ ಕಟ್ಟಿದ್ದಳು ಶಶಿಕಲಾ
1987ರಲ್ಲಿ ಎಂಜಿಆರ್ ವಿಧಿವಶರಾದ ನಂತರ, ಯಾರು ಮುಂದಿನ ಸಿಎಂ ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡುತ್ತಿರುತ್ತದೆ. ಜಯಾನೇ ಸಿಎಂ ಆಗಬಹುದು ಅಂತ ಎಲ್ಲರೂ ಅಂದುಕೊಳ್ಳುವಾಗಲೇ ಜಯಾರನ್ನ ಬದಿಗೊತ್ತಿ 1988ರಲ್ಲಿ ಎಂಜಿಆರ್ ಪತ್ನಿ ಜಾನಕಿ ಸಿಎಂ ಗದ್ದುಗೆ ಏರಿದರು. ಪತಿ ವಿಧಿವಶರಾದ ನಂತರ, ಸಹಜವಾಗಿಯೇ ಜಾನಕಿ ಪಕ್ಷದ ಮುಂದಾಳತ್ವ ವಹಿಸಿಕೊಂಡಿದ್ದರು. ಆದರೆ ಇದು ಶಶಿಕಲಾಗೆ ಇಷ್ಟವಾಗುವುದಿಲ್ಲ. ಯಾಕೆಂದರೆ ಜಾನಕಿ ಸಿಎಂ ಆದರೆ, ನಮಗೆ ಏನೂ ಲಾಭ ಇಲ್ಲ. ಹೇಗಾದರೂ ಮಾಡಿ ಜಯಲಲಿತಾರನ್ನು ಸಿಎಂ ಮಾಡ್ಬೇಕು ಅಂತ ಪ್ಲಾನ್ ಮಾಡುತ್ತಾರೆ. ಅದರಂತೆ ಜಯಲಲಿತಾ ಮೂಲಕ ಪಕ್ಷದಲ್ಲಿ ಬಿರುಕು ಮೂಡಿಸುತ್ತಾರೆ. ಪರಿಣಾಮ ಎಐಎಡಿಎಂಕೆ ಪಕ್ಷದಲ್ಲಿ ಎರಡು ಪಂಗಡ ಶುರುವಾಗುತ್ತದೆ. ಕೊನೆಗೆ ಗಂಡ ಕಟ್ಟಿ ಬೆಳೆಸಿದ ಪಕ್ಷದಲ್ಲಿ, ಪತ್ನಿ ಜಾನಕಿಗೇ ಬೆಂಬಲ ಸಿಗುವುದಿಲ್ಲ. ಬರೀ ಇಪ್ಪತ್ಮೂರು ದಿನಗಳಲ್ಲಿ ಸಿಎಂ ಹುದ್ದೆಯಿಂದ ಇಳಿಯಬೇಕಾಗುತ್ತದೆ ಜಾನಕಿ.
ಜಯಲಲಿತಾರನ್ನ ಯಾರೂ ಮುಟ್ಟಬಾರದು. ಆ ಥರ ಭದ್ರ ಕೋಟೆಯನ್ನ ಶಶಿಕಲಾ ನಿರ್ಮಿಸಿ ಬಿಡ್ತಾರೆ. 40 ರಿಂದ 70 ಮಂದಿಯನ್ನು ಜಯಾ ಸುತ್ತ ನೇಮಿಸ್ತಾಳೆ ಅಲ್ಲದೇ, ಜಯಲಲಿತಾರನ್ನ ಹದ್ದಿನ ಕಣ್ಣಿಟ್ಟು ಕಾಯುತ್ತಿರುತ್ತಾಳೆ. ಇದರಿಂದ ಜಯಲಲಿತಾಗೆ ಆನೆ ಬಲ ಬಂದಂತಾಗುತ್ತೆ. ಈ ಭದ್ರಕೋಟೆಯನ್ನ ಇಟ್ಟುಕೊಂಡೇ, ಜಾನಕಿಯನ್ನು ಮೂಲೆಗುಂಪು ಮಾಡ್ತಾಳೆ ಶಶಿಕಲ. ನಂತರ ಜಯಲಲಿತಾರನ್ನ ಸಿಎಂ ಮಾಡುತ್ತಾರೆ. ಸಿಎಂ ಆದ ಮೇಲೂ, ಜಯಲಲಿತಾ ಸುತ್ತಾ ಅದೇ ಭದ್ರಕೋಟೆ ಇರುತ್ತದೆ. ಆ ಭದ್ರಕೋಟೆಯೊಳಗೆ ನುಗ್ಗಬೇಕಾದರೆ ಶಶಿಕಲ ಪರ್ಮಿಷನ್ ಇರಲೇಬೇಕಿತ್ತು.
ಜಯಲಲಿತಾರನ್ನ ಸಿಎಂ ಮಾಡಲು, ಇಡೀ ತಮಿಳುನಾಡನ್ನೇ ಎದುರು ಹಾಕಿಕೊಳ್ಳುತ್ತಾಳೆ ಶಶಿಕಲಾ. ಆದರೆ ಜಯಲಲಿತಾ ಸಿಎಂ ಆದ ನಂತರ, ಶಶಿಕಲ ವರ್ಚಸ್ಸೇ ಬದಲಾಗಿಬಿಡುತ್ತೆ. ಯಾಕೆಂದರೆ ಜಯಲಲಿತಾ ಸುತ್ತಾ ಇರುವ ಭದ್ರಕೋಟೆಯಲ್ಲಿದ್ದದ್ದು ಶಶಿಕಲಾ ಆಪ್ತರು ಮತ್ತು ಈಕೆಯ ಬಂಧು ಬಳಗ. ದಿನಕರನ್, ಯರಾಮನ್, ಭಾಸ್ಕರನ್, ಅಷ್ಟೇ ಯಾಕೆ, ಜಯಲಲಿತಾ ದತ್ತು ಮಗ ಸುಧಾಕರನ್ ಕೂಡ, ಶಶಿಕಲಾಗೆ ರಿಲೇಷನ್ ಆಗ್ಬೇಕು. ಹೀಗೆ ತನ್ನ ಅಣ್ಣ ತಮ್ಮಂದಿರು, ದೊಡಪ್ಪ ಚಿಕ್ಕಪ್ಪ, ಬಂಧು ಬಳಗ, ಸ್ನೇಹಿತರು ಹೀಗೆ ತನಗೆ ಗೊತ್ತಿದ್ದವರನ್ನೆಲ್ಲಾ ಕರ್ಕೊಂಡು ಬಂದು ಜಯಾ ಸುತ್ತ ನೇಮಿಸುತ್ತಾರೆ. 1991ರಿಂದ ಹಿಡಿದು, ಇವತ್ತಿನವರೆಗೂ ಈ ಟೀಂ ಜಯಲಲಿತಾ ಸುತ್ತಾ ಸರ್ಕಲ್ ಕ್ರಿಯೇಟ್ ಮಾಡಿದೆ. ಈ ಸರ್ಕಲ್ ದಾಟಿ ಹೋಗುವುದು ಅಷ್ಟು ಸುಲಭ ಅಲ್ಲ.
ಜಯಲಲಿತಾಗೆ ಶಶಿಕಲಾನೇ ಎಲ್ಲಾ. ತಾಯಿನೂ ಅವಳೇ, ಗೆಳತೀನೂ ಅವಳೇ, ಸೋದರಿನೂ ಅವಳೇ. ಆದರೆ ಶಶಿಕಲಾ ಹಾಗಿರಲಿಲ್ಲ. ಜಯಲಲಿತಾ ಸಿಎಂ ಆದ್ಮೇಲೆ, ಶಶಿಕಲ ದೊಡ್ಡ ದೊಡ್ಡ ಡೀಲಿಂಗ್ ಶುರು ಮಾಡುತ್ತಾಳೆ ತನ್ನ ಗ್ಯಾಂಗ್ ಮೂಲಕ, ತಮಿಳುನಾಡಿನ ಲೂಟಿಗೆ ನಿಲ್ಲುತ್ತಾರೆ ಶಶಿಕಲ. ಮನ್ನಾರ್ಗುಡಿ ಮಾಫಿಯಾ, ಇಡೀ ತಮಿಳುನಾಡಿನಾದ್ಯಂತ ವ್ಯಾಪಸುತ್ತದೆ. ಬರೀ ಸರ್ಕಾರ ಯಾಕೆ, ಖುದ್ದು ಜಯಲಲಿತಾನೇ ಮನ್ನಾರ್ಗುಡಿ ಗ್ಯಾಂಗ್ನ ಒಳಸಂಚಿಗೆ ಬಲಿಯಾಗ್ತಾರೆ.
ಕ್ಯಾಸೆಟ್ ಅಂಗಡಿ ಒಡತಿಯಾಗಿದ್ದ ಶಶಿಜಕಲ, 5 ಸಾವಿರ ಕೋಟಿಗೆ ಅರಸಿಯಾಗುತ್ತಾಳೆ. ಇನ್ನು ತನ್ನ ಜೊತೆಗಿದ್ದ ಮನ್ನಾರ್ಗುಡಿ ಗ್ಯಾಂಗಿನ ಸದಸ್ಯರಿಗೆ, ಮಿನಿಸ್ಟರ್ ಪೋಸ್ಟ್ ಕೊಡಿಸ್ತಾಳೆ. ಸರ್ಕಾರದಲ್ಲಿ ಒಳ್ಳೊಳ್ಳೆ ಹುದ್ದೆಗಳನ್ನ ಕೊಡಿಸುತ್ತಾಳೆ. ಜಯಲಲಿತಾ ಸಿಎಂ ಆಗಿದ್ದರೂ, ಇನ್ಡೈರೆಕ್ಟಾಗಿ ಶಶಿಕಲಾನೇ ದರ್ಬಾರ್ ಮಾಡುತ್ತಿರುತ್ತಾಳೆ. ಆದರೆ ಅದೊಂದು ದಿನ ಶಶಿಕಲ ಮತ್ತು ಈಕೆಯ ಗ್ಯಾಂಗ್’ನ ವಾಸ್ತವತೆ ತಿಳಿದ ಜಯಾ ಎಲ್ಲರನ್ನೂ ಪಕ್ಷದಿಂದ ಉಚ್ಛಾಟಿಸುತ್ತಾರೆ. ಆದರೆ ಮೂರೇ ತಿಂಗಳಲ್ಲಿ ಮತ್ತೆ ರೆಡ್ಕಾರ್ಪೆಟೆ ಹಾಕಿ ವೆಲ್ಕಂ ಮಾಡ್ತಾರೆ ಜಯಲಲಿತಾ..
ಇದಕ್ಕೆ ಕಾರಣವಿಷ್ಟೇ ಆಡಳಿತ ವಿಚಾರ ಎಲ್ಲಾ ಚೆನ್ನಾಗಿ ಗೊತ್ತಿರೋದು ಶಶಿಕಲಾಗೆ ಮಾತ್ರ. ರಾಜಕೀಯದ ಕಂಪ್ಲೀಟ್ ಹಿಡಿತ ಇರುವುದು ಇದೇ ಶಶಿಕಲಾಗೆ. ಸರ್ಕಾರದ ಹಿಡಿತ ಇದ್ದದ್ದೂ ಈಕೆಗೇ. ಎಲ್ಲವನ್ನೂ ಶಶಿಕಲಾಳೇ ಕಂಟ್ರೋಲ್ ಮಾಡುತ್ತಿದ್ದಳು. ಜಯಲಲಿತಾ ಬರೀ ಬೊಂಬೆ, ಈ ಬೊಂಬೆಯನ್ನ ಆಡಿಸ್ತಾ ಇದ್ದದ್ದು ಈ ಶಶಿಕಲ. ಹೀಗಾಗಿ ತಾನರಿಯದಂತೇ ಜಯಾ ತನ್ನ ಗೆಳತಿ ಹಾಗೂ ಮನ್ನಾರ್’ಗುಡಿಯ ಗ್ಯಾಂಗ್’ನ ಕೈಗೊಂಬೆಯಾಗಿ ಮಾರ್ಪಟ್ಟಿದ್ದಳು.

Comments are closed.